ಕೆಜಿಎಫ್ 2 ಸ್ಕ್ರೀನ್ ಮೇಲೆ ಪುನೀತ್ ರಾಜ್ ಕುಮಾರ್! ಭಾವುಕರಾದ ಫ್ಯಾನ್ಸ್

ಗುರುವಾರ, 14 ಏಪ್ರಿಲ್ 2022 (10:26 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಇಂದು ಬಿಡುಗಡೆಯಾಗಿದ್ದು, ಚಿತ್ರ ವೀಕ್ಷಿಸಲು ಬಂದ ಫ್ಯಾನ್ಸ್ ಪುನೀತ್ ರಾಜ್ ಕುಮಾರ್ ರನ್ನು ತೆರೆ ಮೇಲೆ ನೋಡಿ ಭಾವುಕರಾಗಿದ್ದಾರೆ.

ಕೆಜಿಎಫ್ 2 ಸಿನಿಮಾವನ್ನು ಇತ್ತೀಚೆಗೆ ಅಗಲಿದ ಪುನೀತ್ ರಾಜ್ ಕುಮಾರ್ ಗೆ ಅರ್ಪಿಸುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದರು.

ಅದರಂತೆ ಪುನೀತ್ ಫೋಟೋಗಳನ್ನು ಹಾಕಿ ಅವರಿಗೆ ಭಾವುಕ ಸಂದೇಶ ಬರೆಯಲಾಗಿದೆ. ಇದನ್ನು ನೋಡಿ ಅಭಿಮಾನಿಗಳು ಕೇಕೆ, ಶಿಳ್ಳೆ ಹಾಕಿ ಜೈಕಾರ ಕೂಗಿ ಸಂತೋಷ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ