ಕೊರೋನಾ ಬಗ್ಗೆ ಭಯ ಬಿಡಿ: ಪುನೀತ್ ರಾಜಕುಮಾರ್ ಕಿವಿಮಾತು

ಶನಿವಾರ, 24 ಏಪ್ರಿಲ್ 2021 (09:51 IST)
ಬೆಂಗಳೂರು: ಎಲ್ಲೆಡೆ ಕೊರೋನಾ ಹಬ್ಬುತ್ತಿರುವುದರಿಂದ ಜನರಲ್ಲಿ ಒಂದು ರೀತಿಯ ಭಯ ಮನೆ ಮಾಡಿದೆ. ಇಂತಹ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.


ಬೆಂಗಳೂರು ಪೊಲೀಸರೊಂದಿಗೆ ಕೈ ಜೋಡಿಸಿರುವ ಪುನೀತ್ ರಾಜಕುಮಾರ್ ವಿಡಿಯೋ ಸಂದೇಶದ ಮೂಲಕ ಕೊರೋನಾ ಬಗ್ಗೆ ಅನಗತ್ಯ ಭಯ ಬಿಟ್ಟು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. 

ಅರೆಸ್ಟ್ ಕೊರೋನಾ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಪುನೀತ್ ಜನರಿಗೆ ಧೈರ್ಯ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ಪುನೀತ್ ‘ಕೊರೋನಾ ವ್ಯಾಕ್ಸಿನ್ ಪಡೆದುಕೊಳ್ಳಿ, ಮಾಸ್ಕ್ ಧರಿಸಿ. ಅಕಸ್ಮಾತ್ ಕೊರೋನಾ ಬಂದರೂ ಭಯಪಡಬೇಡಿ. ವೈದ್ಯರ ಸಲಹೆ ಪಡೆದುಕೊಂಡು ಹೋಂ ಕ್ವಾರಂಟೈನ್ ಗೊಳಗಾಗಿ. ನಾಚಿಕೆ, ಭಯ ಬಿಟ್ಟು ಚಿಕಿತ್ಸೆ ಪಡೆದುಕೊಳ್ಳಿ. ಸೋಂಕಿತರಾಗಿದ್ದರೆ ನೆಗೆಟಿವ್ ವರದಿ ಬರುವವರೆಗೆ ಕೆಲಸಕ್ಕೆ ಹೋಗಬೇಡಿ. ನಿಯಮಗಳನ್ನು ಪಾಲಿಸೋಣ. ಕೊರೋನಾ ವಾರಿಯರ್ಸ್ ನ್ನು ಗೌರವಿಸೋಣ. ಯಾರೂ ತಲೆಕೆಡಿಸಿಕೊಳ್ಳಬೇಡಿ, ಭಯಪಡಬೇಡಿ, ಧೈರ್ಯವಾಗಿರಿ’ ಎಂದು ಪುನೀತ್ ಸಂದೇಶ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ