ಐಪಿಎಲ್ 14: ಕೊರೋನಾದಿಂದ ಚೇತರಿಸಿಕೊಂಡ ಡೆಲ್ಲಿ ಸ್ಪಿನ್ನರ್ ಅಕ್ಸರ್ ಪಟೇಲ್

ಶನಿವಾರ, 24 ಏಪ್ರಿಲ್ 2021 (09:45 IST)
ನವದೆಹಲಿ: ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಕ್ಸರ್ ಪಟೇಲ್ ಈಗ ತಂಡವನ್ನು ಕೂಡಿಕೊಳ್ಳಲಿದ್ದಾರೆ.


ಐಪಿಎಲ್ ಆರಂಭಕ್ಕೂ ಮುನ್ನ ಕೊರೋನಾ ಸೋಂಕಿತರಾಗಿದ್ದ ಸ್ಪಿನ್ನರ್ ಅಕ್ಸರ್ ಪಟೇಲ್ ತಂಡಕ್ಕೆ ಶಾಕ್ ನೀಡಿದ್ದರು. ಸೋಂಕಿತರಾದ ತಕ್ಷಣ ಐಸೋಲೇಟ್ ಆಗಿದ್ದ ಅಕ್ಸರ್ ಈಗ ಮತ್ತೆ ಪರೀಕ್ಷೆಗೊಳಗಾಗಿದ್ದು ನೆಗೆಟಿವ್ ವರದಿ ಬಂದಿದೆ.

ಇದೀಗ ಚೆನ್ನೈನಲ್ಲಿರುವ ಡೆಲ್ಲಿ ತಂಡ ಕೂಡಿಕೊಳ್ಳಲಿರುವ ಅಕ್ಸರ್ ಮುಂದಿನ ಪಂದ್ಯದ ವೇಳೆಗೆ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.  ಡೆಲ್ಲಿ ಈಗ ನಾಲ್ಕು ಪಂದ್ಯಗಳ ಪೈಕಿ ಮೂರನ್ನು ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ