ಡಾ. ರಾಜ್ ಹುಟ್ಟುಹಬ್ಬಕ್ಕೆ ಪುತ್ರ ಪುನೀತ್ ರಾಜಕುಮಾರ್ ಹಾಡಿನ ಉಡುಗೊರೆ

ಶನಿವಾರ, 24 ಏಪ್ರಿಲ್ 2021 (09:42 IST)
ಬೆಂಗಳೂರು: ವರನಟ, ಕನ್ನಡದ ಕಣ್ಮಣಿ ಡಾ. ರಾಜಕುಮಾರ್ ಗೆ ಇಂದು ಜನ್ಮದಿನ. ಅವರ ಜನ್ಮದಿನ ಪ್ರಯುಕ್ತ ಪುತ್ರ ಪುನೀತ್ ರಾಜಕುಮಾರ್ ಹಾಡಿನ ಕಾಣಿಕೆಯೊಂದನ್ನು ನೀಡಿದ್ದಾರೆ.


ಡಾ. ರಾಜ್ ಹಾಡಿದ್ದ ಸೂಪರ್ ಹಿಟ್ ಹಾಡು ‘ನಿನ್ನ ಕಂಗಳ ಬಿಸಿಯ ಹನಿಗಳು’ ಹಾಡನ್ನು ಪುನೀತ್ ತಾವೇ ಹಾಡಿ ತಂದೆಗೆ ಅರ್ಪಿಸಿದ್ದಾರೆ. ಈ ಹಾಡನ್ನು ಡಾ.ರಾಜ್ ಜನ್ಮದಿನವಾದ ಇಂದು ಪುನೀತ್ ರಾಜಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ಬಿಡುಗಡೆ ಮಾಡಿದೆ.

ಇದು ನಮ್ಮ ತಂದೆಗೆ ಒಂದು ಪುಟ್ಟ ಕಾಣಿಕೆ ಎಂದು ಪುನೀತ್ ಹೇಳಿಕೊಂಡಿದ್ದಾರೆ. ಇನ್ನು, ಡಾ. ರಾಜ್ ಜನ್ಮದಿನದಂಉ ಚಿತ್ರರಂಗದ ಕಲಾವಿದರು, ಅಭಿಮಾನಿ ದೇವರುಗಳು ಸಾಮಾಜಿಕ ಜಾಲತಾಣದ ಮೂಲಕ ಅಣ್ಣಾವ್ರ ನೆನಪು ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ