ಪುನೀತ್ ಇಲ್ಲದೇ ಅನಾಥವಾಯ್ತು ಈ ಸಿನಿಮಾಗಳು
ತಮ್ಮ ಸಾವಿಗೆ ಮುನ್ನ ಪುನೀತ್ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆ ಸಿನಿಮಾಗಳೀಗ ಕಥಾನಾಯಕನಿಲ್ಲದೇ ಅನಾಥವಾಗಿದೆ.
ದ್ವಿತ ಸಿನಿಮಾದಲ್ಲಿ ಪುನೀತ್ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿತ್ತು. ಜೇಮ್ಸ್ ಮುಗಿಸಿ ದ್ವಿತ ಸಿನಿಮಾದಲ್ಲಿ ಪುನೀತ್ ತೊಡಗಿಸಿಕೊಳ್ಳುವವರಿದ್ದರು. ಇದಲ್ಲದೆ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಹೊಸ ಸಿನಿಮಾಗೆ ಸಹಿ ಹಾಕಿದ್ದರು. ದ್ವಿತ ಮುಗಿದ ಬಳಿಕ ಈ ಸಿನಿಮಾ ಸೆಟ್ಟೇರುತ್ತಿತ್ತು. ಇತ್ತೀಚೆಗೆ ಪೃಥ್ವಿ ನಿರ್ದೇಶಕ ಜೇಕಬ್ ವರ್ಗೀಸ್ ಜೊತೆ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಇದೆಲ್ಲಾ ಮುಗಿದ ಬಳಿಕ ತಮ್ಮದೇ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಹೀಗೆ ಅವರು ಮಾಡಬೇಕಿದ್ದ ಸಾಲು ಸಾಲು ಸಿನಿಮಾಗಳು ಈಗ ಅನಾಥವಾಗಿದೆ.