ಅಪ್ಪು ಸಮಾಧಿಯಲ್ಲಿ ಕುಟುಂಬಸ್ಥರಿಂದ ಪೂಜೆ
ಶಿವರಾಜ್ ಕುಮಾರ್ ದಂಪತಿ, ಪುನೀತ್ ಪತ್ನಿ ಅಶ್ವಿನಿ, ಮಕ್ಕಳು, ವಿನಯ್ ರಾಜ್ ಕುಮಾರ್, ಗುರು ರಾಜ್ ಕುಮಾರ್ ಸೇರಿದಂತೆ ಇಡೀ ಕುಟುಂಬ ವರ್ಗವೇ ಸಮಾಧಿ ಬಳಿ ಸೇರಿದೆ.
ಅಪ್ಪು ಸಮಾಧಿಯನ್ನು ಬಿಳಿಯ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಕುಟುಂಬಸ್ಥರು ಸಾಂಪ್ರದಾಯಿಕವಾಗಿ ಪೂಜೆ ಮಾಡುತ್ತಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕರಿಗೆ ಇಲ್ಲಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇಲ್ಲಿ ಪೂಜೆ ಸಲ್ಲಿಸಿದ ಬಳಿಕ ಕುಟುಂಬಸ್ಥರು ಮತ್ತೆ ಪುನೀತ್ ನಿವಾಸಕ್ಕೆ ತೆರಳಿದ್ದು, ಅಲ್ಲಿ ಸಂಪ್ರದಾಯದಂತೆ ಪೂಜೆ ಮಾಡಲಿದ್ದಾರೆ.