ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆಯಿಂದ ಕಡತ ವಿಲೇವಾರಿ

ಭಾನುವಾರ, 7 ನವೆಂಬರ್ 2021 (20:06 IST)
ಬೆಂಗಳೂರು: ಉಪಚುನಾವಣೆ ಪ್ರಚಾರ ಹಾಗೂ ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆಯಿಂದ ಕಡತ ವಿಲೇವಾರಿ ಬಾಕಿ ಉಳಿದಿದ್ದು, ಹಬ್ಬವಿದ್ದರೂ ಶನಿವಾರ ದಿನವಿಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಡತ ವಿಲೇವಾರಿ ಮಾಡಿದರು.
ಉಪಚುನಾವಣೆ ಪ್ರಚಾರ, ನಟ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ, ಜಿಲ್ಲಾ ಪ್ರವಾಸಗಳಲ್ಲಿ ತೊಡಗಿದ್ದ ಸಿಎಂ ಅವರಿಗೆ ಕಡತ ವಿಲೇವಾರಿ ಸಾಧ್ಯವಾಗಿರಲಿಲ್ಲ. ಕಛೇರಿಯಲ್ಲಿ ಸಾಕಷ್ಟು ಕಡತಗಳು ಸಹಿ ಆಗದೆ ಹಾಗೆಯೇ ಉಳಿದುಕೊಂಡಿದ್ದವು. ಹೀಗಾಗಿ ತಮ್ಮ ದಿನದಂದು ಯಾವುದೇ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ  ಇಡೀ ದಿನ ಕಡತ ವಿಲೇವಾರಿಗೆ ಮೀಸಲಿಟ್ಟಿದ್ದರು.
ಪ್ರಮುಖ ಇಲಾಖೆ ಕಡತಗಳನ್ನು ವಿಳಂಬ ಮಾಡದಂತೆ ತಕ್ಷಣವೇ ವಿಲೇವಾರಿ ಮಾಡಬೇಕು. ಕಡತಗಳನ್ನು ವಿಳಂಬ ಮಾಡುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಈ ವ್ಯಾಪ್ತಿಯಲ್ಲಿರುವ ಕಡತಗಳನ್ನು ಸುಖಾಸುಮ್ಮನೆ ವಿಳಂಬ ಮಾಡದೆ ಕೂಡಲೇ ಇತ್ಯರ್ಥ ಪಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜೊತೆ ಕಡತ ಪರಿಶೀಲನೆ ನಡೆಸಿದರು, ಅವರು ಕಾಲಮಿತಿಯೊಳಗೆ ಕಡತಗಳನ್ನು ವಿಲೇವಾರಿ ಮಾಡುವಂತೆ ನಾನು ಅಧಿಕಾರ ವಹಿಸಿದ ಸಂದರ್ಭದಲ್ಲೇ ಸೂಚನೆ ಕೊಟ್ಟಿದ್ದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಕಡತಗಳು ವಿಲೇವಾರಿಯಾಗಿಲ್ಲ. ಇದಕ್ಕೆ ಕಾರಣ ಏನು ಆದರೂ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ನೀವು ಕಡತ ವಿಲೇವಾರಿ ವಿಳಂಬ ಮಾಡುವುದರಿಂದ ಸರ್ಕಾರದ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಕ್ಕೆ ಸಾಧ್ಯವಾಗುತ್ತಿಲ್ಲ. ಪ್ರತಿಯೊಂದಕ್ಕೂ ಕಾನೂನು ತೊಡಕುಗಳನ್ನು ಮುಂದಿಟ್ಟುಕೊಂಡು ವಿಳಂಬ ಮಾಡು ತ್ತೀರಿ. ಮುಂದೆ ಈ ರೀತಿ ಆದರೆ ನಾನು ಸಹಿಸುವುದಿಲ್ಲ ಎಂದು ಎಚ್ಚರಿಸಿದೆ.
 
ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ:
ಇನ್ನು ಮುಂದೆ ಮುಖ್ಯ ಕಾರ್ಯದರ್ಶಿಗಳೇ ಪ್ರತಿಯೊಬ್ಬರ ಕಡತಗಳನ್ನು 15 ದಿನಕ್ಕೊಮ್ಮೆ ಪರಿಶೀಲನೆ ನಡೆಸಬೇಕು. ನಾನು ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಮುಂದೆ ಇನ್ನಷ್ಟು ವಿಳಂಬವಾದರೆ ಅಧಿಕಾರಿಗಳನ್ನೇ ಹೊಣೆಗಾರ ಮಾಡುವುದಾಗಿ ಎಚ್ಚರಿಕೆ ಕೊಟ್ಟರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ