ಪವರ್ ಸ್ಟಾರ್ ಅಪ್ಪು ಆರಂಭಿಸಿದ್ದ ಒಳ್ಳೆ ಕೆಲಸಗಳಿಗೆ ದೊಡ್ಮನೆಯದ್ದೇ ಸಾರಥ್ಯ

ಶುಕ್ರವಾರ, 5 ನವೆಂಬರ್ 2021 (09:10 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕವಾಗಿ ನಿಧನರಾಗಿದ್ದರಿಂದ ಅವರು ಆರಂಭಿಸಿದ್ದ ಸಾಮಾಜಿಕ ಕೆಲಸಗಳ ಮುಂದಿನ ಭವಿಷ್ಯವೇನು ಎಂಬ ಪ್ರಶ್ನೆ ಎದ್ದಿತ್ತು.

ಮೊನ್ನೆಯಷ್ಟೇ ತಮಿಳು ನಟ ವಿಶಾಲ್, ತಾವು ಪುನೀತ್ ಆರಂಭಿಸಿದ್ದ ಮಕ್ಕಳ ಉಚಿತ ಶಿಕ್ಷಣ ಯೋಜನೆಯ ಹೊಣೆ ಹೊರುವುದಾಗಿ ಹೇಳಿದ್ದರು.

ಆದರೆ ಈಗ ದೊಡ್ಮನೆ ಕಡೆಯಿಂದಲೇ ಎಲ್ಲಾ ಕಾರ್ಯಕ್ರಮಗಳು ಮುಂದುವರಿದುಕೊಂಡು ಹೋಗಲಿವೆ ಎಂಬ ಮಾತು ಕೇಳಿಬಂದಿದೆ. ಶಿವರಾಜ್ ಕುಮಾರ್ ಮತ್ತು ಪುನೀತ್ ಪತ್ನಿ ಅಶ್ವಿನಿ ನೇತೃತ್ವದಲ್ಲಿ ಪುನೀತ್ ಆರಂಭಿಸಿದ್ದ ಮಕ್ಕಳಿಗೆ ಉಚಿತ ಶಿಕ್ಷಣ, ಶಿಕ್ಷಣ ಆಪ್, ಅನಾಥಾಶ್ರಮ, ಗೋಶಾಲೆಗಳ ಯೋಜನೆಗಳು ಮುಂದುವರಿಯಲಿವೆ. ತಮ್ಮ ಸಾವಿಗೆ ಮುನ್ನವೇ ಪುನೀತ್ ಚ್ಯಾರಿಟಿ ಕೆಲಸಗಳಿಗೆ ನೆರವಾಗಲೆಂದೇ 8 ಕೋಟಿ ರೂ. ಮೀಸಲಿಟ್ಟಿದ್ದರಂತೆ. ಹೀಗಾಗಿ ಎಲ್ಲವೂ ದೊಡ್ಮನೆ ಕಡೆಯಿಂದಲೇ ಮುಂದುವರಿಯಲಿದೆ. ಈ ಬಗ್ಗೆ ಸ್ವತಃ ಶಿವಣ್ಣ ಪ್ರತಿಕ್ರಿಯಿಸಿದ್ದು, ಅಪ್ಪು ಮಾಡುತ್ತಿದ್ದ ಸಮಾಜ ಸೇವೆಯನ್ನು ನಾವು ಮುಂದುವರಿಸೋಣ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ