ಪುನೀತ್-ಸಂತೋಷ್ ಆನಂದ್ ರಾಮ್ ಹೊಸ ಸಿನಿಮಾ ಮುಂದಿನ ವರ್ಷಕ್ಕೆ

ಭಾನುವಾರ, 19 ಸೆಪ್ಟಂಬರ್ 2021 (10:05 IST)
ಬೆಂಗಳೂರು: ಯುವರತ್ನ ಸಿನಿಮಾ ಬಳಿಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರಲಿದೆ ಎಂಬ ಸುದ್ದಿಯಿತ್ತು. ಅದರ ಬಗ್ಗೆ ಅಪ್ ಡೇಟ್ ಒಂದು ಸಿಕ್ಕಿದೆ.


ಈ ಹಿಟ್ ಜೋಡಿ ಮತ್ತೊಂದು ಸಿನಿಮಾ ಮಾಡಲು ಜೊತೆಯಾಗಿದ್ದು, ಇದು ಮುಂದಿನ ವರ್ಷ ಸೆಟ್ಟೇರಲಿದೆ ಎಂಬ ಸುದ್ದಿ ಬಂದಿದೆ. ರಾಜಕುಮಾರ, ಯುವರತ್ನ ಬಳಿಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಪುನೀತ್ ಅಭಿನಯಿಸಲಿದ್ದಾರೆ.

ಜೇಮ್ಸ್ ಚಿತ್ರೀಕರಣ ಮುಗಿಸಿರುವ ಪುನೀತ್, ದ್ವಿತ ಸಿನಿಮಾದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಎರಡು ಸಿನಿಮಾಗಳ ಬಳಿಕ ಹೊಸ ಸಿನಿಮಾ ಸೆಟ್ಟೇರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ