ಐಪಿಎಲ್ ವೀಕ್ಷಣೆಗೆ ದುಬೈಗೆ ತೆರಳಿದ ಕಿಚ್ಚ ಸುದೀಪ್

ಭಾನುವಾರ, 19 ಸೆಪ್ಟಂಬರ್ 2021 (08:59 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ರಿಕೆಟ್ ನ ಅಪ್ಪಟ ಅಭಿಮಾನಿ. ಇಂದಿನಿಂದ ಆರಂಭವಾಗುತ್ತಿರುವ ಐಪಿಎಲ್ ಪಂದ್ಯವನ್ನು ಖುದ್ದಾಗಿ ವೀಕ್ಷಿಸಲು ಸುದೀಪ್ ದುಬೈಗೆ ತೆರಳಿದ್ದಾರೆ.


ಐಪಿಎಲ್ 14 ರ ಎರಡನೇ ಹಂತದ ಪಂದ್ಯಗಳು ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣಸಾಡಲಿದೆ.

ಕ್ರಿಕೆಟಿಗರ ಜೊತೆ ಸ್ನೇಹ ಹೊಂದಿರುವ ಸುದೀಪ್ ಐಪಿಎಲ್ ವೇಳೆ ಕನ್ನಡ ಕಾಮೆಂಟರಿಯಲ್ಲೂ ಪಾಲ್ಗೊಳ್ಳುತ್ತಾರೆ. ಯುಎಇನಲ್ಲಿ ನಡೆಯಲಿರುವ ಪಂದ್ಯಗಳನ್ನು ಮೈದಾನದಲ್ಲಿ ವೀಕ್ಷಿಸಲು ಪ್ರೇಕ್ಷಕರಿಗೂ ಅನುಮತಿ ನೀಡಲಾಗಿದೆ. ಹೀಗಾಗಿ ಸುದೀಪ್ ದುಬೈ ವಿಮಾನವೇರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ