ಹೊಸ ಸಿನಿಮಾಗೆ ಆನ್ ಲೈನ್ ಆಡಿಷನ್ ಮಾಡಲಿರುವ ಪುನೀತ್ ರಾಜಕುಮಾರ್ ನಿರ್ಮಾಣ ಸಂಸ್ಥೆ

ಶುಕ್ರವಾರ, 15 ಮೇ 2020 (08:53 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಹೊಸಬರಿಗೆ ಆದ್ಯತೆ ನೀಡುತ್ತಿದೆ. ಹೊಸ ನಿರ್ದೇಶಕರು, ನಟರು, ತಂತ್ರಜ್ಞರನ್ನಿಟ್ಟುಕೊಂಡು ಇದುವರೆಗೆ ಎರಡು ಸದಭಿರುಚಿಯ ಚಿತ್ರ ಕೊಟ್ಟಿರುವ ಪಿಆರ್ ಕೆ ಪ್ರೊಡಕ್ಷನ್ ಈಗ ಮತ್ತೊಂದು ಹೆಜ್ಜೆಯಿಟ್ಟಿದೆ.


ಇನ್ನೂ ಹೆಸರಿಡದ ಹೊಸ ಸಿನಿಮಾಗೆ ಪಿಆರ್ ಕೆ ಪ್ರೊಡಕ್ಷನ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಿದೆ. ಇದಕ್ಕಾಗಿ ನಟನೆಯಲ್ಲಿ ಆಸಕ್ತಿಯಿರುವವರು, ಕಲಾವಿದರು ತಮ್ಮ ನಟನೆಯ ವಿಡಿಯೋವವನ್ನು ಕಳುಹಿಸಿಕೊಡಬಹುದಾಗಿದೆ. ಆನ್ ಲೈನ್ ಮೂಲಕ ಅಡಿಷನ್ ನಡೆಯಲಿದೆ. ಈ ಸಿನಿಮಾವನ್ನು ಅಶ್ವಿನ್ ಪುನೀತ್ ರಾಜಕುಮಾರ್ ನಿರ್ಮಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ