ಹೈದರಾಬಾದ್: ಇತ್ತೀಚೆಗಷ್ಟೇ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಪುಷ್ಪ 2 ನಟ ಅಲ್ಲು ಅರ್ಜುನ್ ರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಪುಷ್ಪ 2 ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಟನನ್ನು ನೋಡಲು ನೂಕು ನುಗ್ಗಲು ಉಂಟಾಗಿತ್ತು. ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಈ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಾಗಿತ್ತು.
ಪ್ರಕರಣ ಕುರಿತು ಚೀಕಟಪಲ್ಲಿ ಪೊಲೀಸರು ಉತ್ತರ ನೀಡುವಂತೆ ಅಲ್ಲು ಅರ್ಜುನ್ ಗೆ ನೋಟಿಸ್ ನೀಡಿದ್ದರು. ಆದರೂ ಅವರು ಉತ್ತರಿಸಿರಲಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅಲ್ಲು ಅರ್ಜುನ್ ಮತ್ತು ಅವರ ಇಬ್ಬರು ಬಾಡಿ ಗಾರ್ಡ್ ಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಬಂದಿದೆ.
ಈಗಾಗಲೇ ಅಲ್ಲು ಅರ್ಜುನ್ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಆದರೆ ಅದಿನ್ನೂ ವಿಚಾರಣೆಯಾಗಿಲ್ಲ. ಈ ನಡುವೆ ಮೃತರ ಕುಟುಂಬಕ್ಕೆ ಅಲ್ಲು ಅರ್ಜುನ್ ಧನ ಸಹಾಯವನ್ನೂ ಮಾಡಿದ್ದರು. ಆದರೆ ಇದು ಯಾವುದೂ ಅವರ ಬಂಧನದ ಮೇಲೆ ಪರಿಣಾಮ ಬೀರಿಲ್ಲ. ನೇರವಾಗಿ ಅಲ್ಲು ನಿವಾಸಕ್ಕೆ ತೆರಳಿ ಅವರ ಬೆಡ್ ರೂಂನಿಂದಲೇ ನಟನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಈ ವೇಳೆ ಅವರು ಪೊಲೀಸರ ವಿರುದ್ಧ ಅಸಹನೆ ತೋರಿದ್ದರು. ಅವರ ತಂದೆ ಅಲ್ಲು ಅರವಿಂದ್ ಕೂಡಾ ಮಗನ ಬಂಧನ ತಡೆಯುವ ಯತ್ನ ಮಾಡಿದ್ದಾರೆ. ಒಟ್ಟಿನಲ್ಲಿ ಬಂಧನ ವೇಳೆ ಸಣ್ಣ ಡ್ರಾಮಾವೇ ನಡೆದಿದೆ ಎನ್ನಲಾಗಿ.ದೆ