ಆಂಟೊನಿ ತಟ್ಟಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್
ಕೆಲವು ದಿನಗಳ ಹಿಂದಷ್ಟೇ ಕೀರ್ತಿ ಸುರೇಶ್ ತಮ್ಮ ಮದುವೆ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಂದು ದಿಡೀರ್ ಆಗಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗೋವಾದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ಕಾರ್ಯ ನೆರವೇರಿದೆ.
ತಮಿಳು ಅಯ್ಯಂಗಾರ್ ಶೈಲಿಯಲ್ಲಿ ಮದುವೆ ಕಾರ್ಯಗಳು ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಕೇವಲ ಇಬ್ಬರ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಕೀರ್ತಿ ಸುರೇಶ್ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಳ್ಳುತ್ತಿದ್ದಂತೇ ಸಾಕಷ್ಟು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕೀರ್ತಿ ಸುರೇಶ್ ಚಿತ್ರರಂಗದಲ್ಲಿ ಬ್ಯುಸಿಯಾಗಿರುವಾಗಲೇ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಇನ್ನೇನು ಬಾಲಿವುಡ್ ಗೂ ಕೀರ್ತಿ ಸುರೇಶ್ ಕಾಲಿಡುತ್ತಿದ್ದಾರೆ. ಆಂಟನಿ ತಟ್ಟಿಲ್ ಉದ್ಯಮಿಯಾಗಿದ್ದು ಕೀರ್ತಿ ಸುರೇಶ್ ಗೆ ಬಹುಕಾಲದ ಗೆಳೆಯರಾಗಿದ್ದಾರೆ.