Puttakkana Makkalu: ಡಿಸಿ ಹಿಂಗ್ ಬೀದಿ ತಿರ್ಗೋದು ಈಗ್ಲೇ ನೋಡ್ತಿರೋದು ಎಂದು ಕಾಲೆಳೆದ ಫ್ಯಾನ್ಸ್‌

Sampriya

ಗುರುವಾರ, 26 ಸೆಪ್ಟಂಬರ್ 2024 (17:19 IST)
Photo Courtesy X
ಬೆಂಗಳೂರು:  ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ಇಂಟ್ರೆಸ್ಟಿಂಗ್ ಕಥೆಯೊಂದಿಗೆ ಪ್ರೇಕ್ಷರನ್ನು ಹಿಡಿದಿಟ್ಟುಕೊಂಡಿದೆ.

ಸದ್ಯ ಕಂಠಿ ಹಾಗೂ ಸ್ನೇಹಳ ಕ್ಯೂಟ್ ಜೋಡಿ ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ. ಇದೀಗ ಹೆಂಡತಿ ಡಿಸಿ ಆದ ಖುಷಿಯಲ್ಲಿ ಕಂಠಿ ಇದ್ದಾನೆ. ಜಿಲ್ಲಾಧಿಕಾರಿ ಆಗುವ ಹಂತದಲ್ಲಿ ಪತ್ನಿಯ ಪ್ರತಿಯೊಂದು ಹೆಜ್ಜೆಯಲ್ಲಿ ಕಂಠಿ ಜತೆಗಿದ್ದ.

ಇದೀಗ ಕಂಠಿಯ ಜಮೀನು ತೆರವಿಗೆ ಡಿಸಿ ಸ್ನೇಹಾ ಮುಂದಾಗಿದ್ದಾಳೆ. ಇದನ್ನು ನೋಡಿದ ಫ್ಯಾನ್ಸ್‌ ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.ನಿಜವಾಗಲೂ ದರಿದ್ರ ಧಾರಾವಾಹಿ ಆಗೋಯ್ತು,  ಗುರುವೇ ಇದು ಸೂರ್ಯವಂಶ ಅಲ್ಲ ತಾನೇ, ಮುಂದೆ ಗಸಗಸೆ ಪಾಯಸ ಬಂದ್ರೆ ಅಷ್ಟೇ ಮತ್ತೆ.

ಮತ್ತೊಬ್ಬರು ಈ ಸಣ್ಣ ಪುಟ್ಟ ವಿಷಯಕ್ಕೆಲ್ಲ ಡಿಸಿ ಬರ್ತಾರಾ ಯಾವು ಇದೆಲ್ಲ ಎಂದಿದ್ದಾರೆ. ಮತ್ತೊಬ್ಬರು ಯಪ್ಪ ಇದೇನು ಹಿಂದೆ ಮುಂದೆ ಏನು ವಿಚಾರಣೆ ಮಾಡದೆ ಬರೀ ಕಂಪ್ಲೇಟ್ ತೊಗೊಂಡು ಅರೆಸ್ಟೆ ಮಾಡೋದು ಇದೆ ಆಗೋಯ್ತು, ಇನ್ನೊಬ್ಬರು ಡಿಸಿ ಹಿಂಗ್ ಬೀದಿ ತಿರ್ಗೋದು ಈಗ್ಲೇ ನೋಡ್ತಿರೋದು  ಎಂದು ಕಮೆಂಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ