ಮೂಲಗಳ ಪ್ರಕಾರ, ಕರಣ್ ಜೋಹರ್, ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಣೆಯ ಸಂದರ್ಭದಲ್ಲಿ ಚಿತ್ರಕ್ಕೆ ಕತ್ತರಿ ಹಾಕದಿರಲು ಖುದ್ದಾಗಿ ಹಾಜರಿದ್ದರು. ಚಿತ್ರ ನಿರ್ಮಾಣ, ಚಿತ್ರಕಥೆಯನ್ನು ಹೊಗಳಿದ ಸೆನ್ಸಾರ್ ಮಂಡಳಿ ಅಧಿಕಾರಿಗಳು ರಣಬೀರ್ ಕಪೂರ್ ಮತ್ತು ಐಶ್ವರ್ಯ ರೈ ಹಾಟ್ ದೃಶ್ಯಗಳು ಎಲ್ಲೆಯನ್ನು ಮೀರಿವೆ ಎಂದು ಕತ್ತರಿ ಹಾಕಿದ್ದಾರೆ.