ಅಪ್ಪು ಅವಮಾನಕ್ಕೆ ಕ್ಷಮೆ ಯಾಚಿಸಿದ ರಕ್ಷಿತಾ, ರಚಿತಾ
ವೇದಿಕೆಯಲ್ಲಿ ಅಪ್ಪು ಫೋಟೋ ಇರಿಸಿ, ಅವರ ಎದುರೇ ಶಾಂಪೈನ್ ಬಾಟಲಿ ಓಪನ್ ಮಾಡಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ನಿರ್ದೇಶಕ ಪ್ರೇಮ್ ಮಾಧ್ಯಮಗಳ ಮುಂದೆ ಕ್ಷಮ ಕೇಳಿದ್ದರು.
ಇದಾದ ಬಳಿಕ ರಕ್ಷಿತಾ ಪ್ರೇಮ್, ರಚಿತಾ ರಾಮ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಪ್ಪು ಅಭಿಮಾನಿಗಳಿಗೆ ಅವಮಾನಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಹಾಗಿದ್ದರೂ ನಮ್ಮಿಂದಾಗಿ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ ಎಂದಿದ್ದಾರೆ.