ವಿದ್ಯಾರ್ಥಿ ಭವನದಲ್ಲಿ ದೋಸೆ, ಬೆಂಗಳೂರಿನಲ್ಲಿ ಮುಖ ಮುಚ್ಚಿಕೊಂಡು ರಚಿತಾ ರಾಂ ಸುತ್ತಾಟ
ಮುಖ ಮುಚ್ಚಿಕೊಂಡು ಮೊದಲು ಆಂಜನೇಯ ಸ್ವಾಮಿ ದೇವರ ದರ್ಶನ ಪಡೆದ ರಚಿತಾ ಬಳಿಕ ವಿದ್ಯಾರ್ಥಿ ಭವನಕ್ಕೆ ತೆರಳಿ ಮಸಾಲೆ ದೋಸೆ ಸವಿದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಖ ಮುಚ್ಚಿಕೊಂಡು ಓಡಾಡಿದ್ದರಿಂದ ಯಾರೂ ರಚಿತಾ ಗುರುತು ಹಿಡಿದಿರಲಿಲ್ಲ. ಆದರೆ ವಿದ್ಯಾರ್ಥಿ ಭವನದಲ್ಲಿ ಮಾತ್ರ ದೋಸೆ ಸವಿದ ಬಳಿಕ ಮೆಚ್ಚುಗೆಯ ನೋಟ್ ಬರೆದು ಅಲ್ಲಿನ ಸಿಬ್ಬಂದಿಗಳೊಂದಿಗೆ ಫೋಟೋಗೂ ಪೋಸ್ ಕೊಟ್ಟಿದ್ದಾರೆ.