ಧ್ರುವ ಸರ್ಜಾ ಅಭಿಮಾನಿಗಳ ಕ್ವಾಟ್ಲೆಗೆ ಸುಸ್ತಾದ ರಚಿತಾ ರಾಮ್

ಶುಕ್ರವಾರ, 17 ಡಿಸೆಂಬರ್ 2021 (17:28 IST)
ಬೆಂಗಳೂರು: ಲವ್ ಯೂ ರಚ್ಚು ಟ್ರೈಲರ್ ರಿಲೀಸ್ ವೇಳೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳ ಗದ್ದಲ ನಟಿ ರಚಿತಾ ರಾಂಗೆ ಕಿರಿ ಕಿರಿ ತಂದ ಘಟನೆ ನಡೆದಿದೆ.

ಅಜೇಯ್ ರಾವ್-ರಚಿತಾ ಪ್ರಮುಖ ಪಾತ್ರದಲ್ಲಿರುವ ಲವ್ ಯೂ ರಚ್ಚು ಸಿನಿಮಾ ಟ್ರೈಲರ್ ರನ್ನು ಲಾಂಚ್ ಮಾಡಲು ಧ್ರುವ ಸರ್ಜಾ ಅಭಿಮಾನಿಗಳು ಬಂದಿದ್ದರು. ಹೀಗಾಗಿ ಅಲ್ಲಿ ಧ್ರುವ ಅಭಿಮಾನಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದರು.

ರಚಿತಾ ರಾಂ ವೇದಿಕೆಯೇರುವ ವೇಳೆಗೆ ಧ್ರುವ ಅಭಿಮಾನಿಗಳು ಜೋರಾಗಿ ತಮ್ಮ ಮೆಚ್ಚಿನ ನಟನಿಗೆ ಜೈಕಾರ ಹಾಕುತ್ತಿದ್ದರು. ರಚಿತಾ ಸುಮ್ಮನಿರುವಂತೆ ಮೆತ್ತಗೆ ಹೇಳಿದರೂ ಅವರ ಜೈಕಾರ ಮುಂದುವರಿದೇ ಇತ್ತು. ಇದರಿಂದ ಕಿರಿ ಕಿರಿಯಾದ ರಚಿತಾ ಜೋರಾಗಿ ಒಂದು ಆವಾಜ್ ಹಾಕಬೇಕಾಯಿತು. ಆಮೇಲೆ ಅಭಿಮಾನಿಗಳು ಕೊಂಚ ತಣ್ಣಗಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ