ನಟಿ ರಾಧಿಕಾ ಕುಮಾರಸ್ವಾಮಿ ದಮಯಂತಿ ಅವತಾರಕ್ಕೆ ಬೆಚ್ಚಿಬಿದ್ದ ಪ್ರೇಕ್ಷಕರು

ಗುರುವಾರ, 12 ಸೆಪ್ಟಂಬರ್ 2019 (09:08 IST)
ಬೆಂಗಳೂರು: ರಾಧಿಕಾ ಕುಮಾರಸ್ವಾಮಿ ಹಲವು ದಿನಗಳ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕೆಲವು ದಿನಗಳ ಬ್ರೇಕ್ ನ ನಂತರ ತಮ್ಮದೇ ಸ್ವಂತ ನಿರ್ಮಾಣದಲ್ಲಿ ನಟಿಸಿರುವ ದಮಯಂತೀ ಚಿತ್ರದ ಮೂಲಕ ರಾಧಿಕಾ ಸುದ್ದಿಯಾಗಿದ್ದಾರೆ.


ದಮಯಂತಿ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣದ ವೇಳೆ ರಾಧಿಕಾ ಬಿದ್ದು ಏಟು ಮಾಡಿಕೊಂಡು ಕೆಲವು ದಿನ ವಿಶ್ರಾಂತಿ ತೆಗೆದುಕೊಂಡಿದ್ದರು. ಅದಾದ ಬಳಿಕ ಚಿತ್ರೀಕರಣಕ್ಕೆ ಮರಳಿದ್ದರು.

ಈಗ ಚಿತ್ರ ತಂಡದಿಂದ ಹೊಸ ಸುದ್ದಿ ಬಂದಿದ್ದು ಸೆಪ್ಟೆಂಬರ್ 18 ರಂದು ಟೀಸರ್ ಬಿಡುಗಡೆ ಮಾಡುತ್ತಿರುವುದಾಗಿ ಪ್ರಕಟಿಸಿದೆ. ಚಿತ್ರದ ಪೋಸ್ಟರ್ ನಲ್ಲಿ ರಾಧಿಕಾ ಕುಮಾರಸ್ವಾಮಿಯವರ ಭಯಾನಕ  ಅವತಾರ ನೋಡಿ ಇದೊಂದು ಥ್ರಿಲ್ಲರ್ ಸಿನಿಮಾ ಎಂಬುದು ಪಕ್ಕಾ ಆಗುತ್ತದೆ. ಹೆಚ್ಚಿನ ಮಾಹಿತಿಗೆ ಟೀಸರ್ ಬಿಡುಗಡೆವರೆಗೂ ಕಾಯಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ