ರುದ್ರಪ್ರಯಾಗ ಸಿನಿಮಾದ ಹೀರೋ ಯಾರೆಂದು ಬಹಿರಂಗಪಡಿಸಿದ ರಿಷಬ್ ಶೆಟ್ಟಿ

ಬುಧವಾರ, 11 ಸೆಪ್ಟಂಬರ್ 2019 (09:37 IST)
ಬೆಂಗಳೂರು: ರಿಷಬ್ ಶೆಟ್ಟಿ ರುದ್ರಪ್ರಯಾಗ ಎನ್ನುವ ಸಿನಿಮಾ ನಿರ್ದೇಶನ ಮಾಡಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಿನಿಮಾಗಾಗಿ ರಿಷಬ್ ಭರ್ಜರಿ ತಯಾರಿ ನಡೆಸಿದ್ದಾರೆ.


ರುದ್ರಪ್ರಯಾಗ ಸಿನಿಮಾಗಾಗಿ ಪಶ್ಚಿಮ ಘಟ್ಟದ ಕಾಡು ಮೇಡುಗಳಲ್ಲಿ ಅಲೆದು ಲೊಕೇಷನ್ ಗುರುತಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದ ಪಾತ್ರವರ್ಗದ ಬಗ್ಗೆ ರಿಷಬ್ ಇದುವರೆಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಆದರೆ ಈಗ ರುದ್ರಪ್ರಯಾಗದ ನಾಯಕ ಯಾರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅದು ಬೇರಾರೂ ಅಲ್ಲ, ರಿಷಬ್ ನೆಚ್ಚಿನ ನಟ ಅನಂತ್ ನಾಗ್. ಹಿರಿಯ ನಟ ಅನಂತ್ ನಾಗ್ ರನ್ನು ರುದ್ರಪ್ರಯಾಗದ ನಾಯಕ ಎಂದು ಘೋಷಿಸಲು ಸಂತೋಷವಾಗುತ್ತಿದೆ ಎಂದು ರಿಷಬ್ ಹೇಳಿಕೊಂಡಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲೂ ಅನಂತ್ ನಾಗ್ ಪ್ರಮುಖ ಪಾತ್ರ ವಹಿಸಿದ್ದರು. ಅದಾದ ಬಳಿಕ ಮತ್ತೆ ಈ ಹಿರಿಯ ನಟನಿಗೆ ಆಕ್ಷನ್ ಕಟ್ ಹೇಳುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ರಿಷಬ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ