ಪ್ರೇಮಿಗಳ ದಿನದಂದೇ ಯಶ್ ಬಗ್ಗೆ ಇದೆಂಥಾ ಹೇಳಿಕೆ ಕೊಟ್ರು ರಾಧಿಕಾ ಪಂಡಿತ್?!
ಗುರುವಾರ, 14 ಫೆಬ್ರವರಿ 2019 (16:39 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಫೇವರಿಟ್ ಜೋಡಿ ಎಂದರೆ ಸದ್ಯದ ಮಟ್ಟಿಗೆ ನೆನಪಾಗುವುದು ರಾಧಿಕಾ-ಯಶ್ ಜೋಡಿ.
ಹಲವು ವರ್ಷಗಳ ಒಟ್ಟಿಗೆ ಕೆಲಸ ಮಾಡಿ, ಒಡನಾಡಿ, ಸ್ನೇಹಿತರಾಗಿ ಕೊನೆಗೆ ಪ್ರೀತಿಗೆ ಬಿದ್ದು, ಮದುವೆಯಾದ ಈ ಜೋಡಿಯ ಅನ್ಯೋನ್ಯತೆ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.
ಇದೀಗ ಪ್ರೇಮಿಗಳ ದಿನದಂದು ಪತಿ ರಾಕಿಂಗ್ ಸ್ಟಾರ್ ಯಶ್ ಗೆ ರಾಧಿಕಾ ಪಂಡಿತ್ ವಿಶೇಷ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. ‘ನಾವು ಖಂಡಿತಾ ಪರ್ಫೆಕ್ಟ್ ದಂಪತಿ ಅಲ್ಲ. ನಾವೂ ಜಗಳ ಆಡ್ತೀವಿ, ವಾದ ಮಾಡ್ತೀವಿ, ಅಭಿಪ್ರಾಯ ಬೇಧವಿರುತ್ತದೆ, ಕೆಲವೊಂದು ವಿಚಾರವನ್ನು ಇಬ್ಬರೂ ಪರಸ್ಪರ ಧ್ವೇಷಿಸುತ್ತೇವೆ. ಹಾಗಿದ್ದರೂ ನಮ್ಮಿಬ್ಬರನ್ನು ಒಂದುಗೂಡಿಸುವುದು ಲವ್. ಇದು ಬೇರೆಲ್ಲಾ ವೈರುಧ್ಯಗಳನ್ನು ಮರೆಸುತ್ತದೆ. ಪ್ರೇಮಿಗಳ ದಿನದ ಶುಭಾಷಯಗಳು’ ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ