ರಿಷಬ್ ಶೆಟ್ಟಿ ‘ಬೆಲ್ ಬಾಟಂ’ ನೋಡಲು ಈಗಲೇ ಬುಕಿಂಗ್ ಮಾಡಿ
ಇದುವರೆಗೆ ನಿರ್ದೇಶಕರಾಗಿ ತೆರೆಯ ಹಿಂದೆ ಕಿರಿಕ್ ಪಾರ್ಟಿ, ಕಾಸರಗೋಡು ಸಿನಿಮಾ ಮೂಲಕ ಮೋಡಿ ಮಾಡಿದ್ದ ರಿಷಬ್ ಶೆಟ್ಟಿ ಈ ಬಾರಿ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ನೋಡಿ ಈಗಾಗಲೇ ಜನರು ಚಿತ್ರದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಇದೂ ಕೂಡಾ ಹಿಟ್ ಆಗುವ ಸೂಚನೆ ನೀಡಿದೆ.