ರಾಕಿ ಬಾಯ್ ಯಶ್-ರಾಧಿಕಾ ಮಕ್ಕಳ ರಕ್ಷಾ ಬಂಧನ ನೋಡಿ ನೆಟ್ಟಿಗರು ಫುಲ್ ಫಿದಾ

ಮಂಗಳವಾರ, 4 ಆಗಸ್ಟ್ 2020 (09:45 IST)
ಬೆಂಗಳೂರು: ನಿನ್ನೆ ರಾಖಿ ಹಬ್ಬದ ಪ್ರಯಕ್ತ ರಾಕಿಂಗ್  ಸ್ಟಾರ್ ಯಶ್ ಮನೆಯಲ್ಲೂ ಹಬ್ಬ ಜೋರಾಗಿಯೇ ನಡೆದಿತ್ತು. ಅದರಲ್ಲೂ ರಾಕಿ ಬಾಯ್ ನ ಇಬ್ಬರು ಮಕ್ಕಳ ಹಬ್ಬದ ಸಂಭ್ರಮದ ಫೋಟೋ ಮಾತ್ರ ಫುಲ್ ವೈರಲ್ ಆಗಿದೆ.


ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪುತ್ರಿ ಐರಾ ಯಶ್ ಮತ್ತು ಪುತ್ರ ರಾಖಿ ಹಬ್ಬ ಆಚರಿಸುತ್ತಿರುವ ಫೋಟೋಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಐರಾ ತನ್ನ ಮುದ್ದು ತಮ್ಮನಿಗೆ ಆರತಿ ಎತ್ತಿ ರಾಖಿ ಕಟ್ಟಿ ಮುದ್ದಿಸುವ ದೃಶ್ಯವಿದೆ.

ಇದನ್ನು ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಬೆಳಿಗ್ಗೆಯೇ ತಮ್ಮ ಸಹೋದರನಿಗೆ ರಾಖಿ ಹಬ್ಬದ ಶುಭಾಷಯ ಕೋರಿದ್ದ ರಾಧಿಕಾ ಸಂಜೆ ವೇಳೆಗೆ ನಿಮಗೊಂದು ಸರ್ಪ್ರೈಸ್ ಕಾದಿದೆ ಎಂದಿದ್ದರು. ಅದರಂತೆ ತಮ್ಮಿಬ್ಬರು ಮುದ್ದು ಮಕ್ಕಳು ರಾಖಿ ಹಬ್ಬ ಆಚರಿಸುವ ಕ್ಷಣಗಳನ್ನು ಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ