ಪತ್ನಿಯನ್ನು ಎಷ್ಟೆಲ್ಲಾ ಗೋಳು ಹೊಯ್ಕೊಳ್ತಾರೆ ಯಶ್! ಸಾಕ್ಷಿ ಕೊಟ್ಟ ರಾಧಿಕಾ ಪಂಡಿತ್
ನಿನ್ನೆ ಯಶ್-ರಾಧಿಕಾ ದಂಪತಿಯ ವಿವಾಹ ವಾರ್ಷಿಕೋತ್ಸವವಿತ್ತು. ಇದನ್ನು ಸುಂದರ ಕಡಲತೀರಲ್ಲಿ ಕಳೆದಿರುವ ಜೋಡಿ ಈ ಸಂದರ್ಭದ ಫೋಟೋಗಳನ್ನು ಶೇರ್ ಮಾಡಿದೆ.
ರಾಧಿಕಾ ಫೋಟೋಗೆ ಪೋಸ್ ಕೊಡಲು ಹೇಳಿದರೆ ಯಶ್ ಎಷ್ಟೆಲ್ಲಾ ಆಟ ಆಡಿಸುತ್ತಾರೆ ಎಂದು ಫೋಟೋ ಸಮೇತ ಅಭಿಮಾನಿಗಳಿಗೆ ತೋರಿಸಿದ್ದಾರೆ. ಮೊದಲ ಫೋಟೋದಲ್ಲಿ ಮುಖಕ್ಕೆ ಟವೆಲ್ ಮುಚ್ಚಿಕೊಂಡಿರುವ ಯಶ್ ಬಳಿಕ ಬೇಕೆಂದೇ ವಿಚಿತ್ರವಾಗಿ ಮುಖ ಮಾಡಿಕೊಂಡು ರಾಧಿಕಾಗೆ ಆಟ ಆಡಿಸುತ್ತಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ರಾಧಿಕಾ, ಪುರುಷರನ್ನು ಫೋಟೋಗೆ ಪೋಸ್ ಕೊಡಿಸೋದೇ ಕಷ್ಟ. ಈಗ ನಿಮಗೇ ಗೊತ್ತಾಗಿರಬೇಕು ಈ ರೀತಿ ನನಗೆ ಕಾಟ ಕೊಡುತ್ತಿರುವವರು ಯಾರು ಅಂತ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.