ಸ್ಪೆಷಲ್ ಡೇ ಬಗ್ಗೆ ಸ್ಪೆಷಲ್ ಆಗಿ ಹೇಳಿಕೊಂಡ ರಾಧಿಕಾ ಪಂಡಿತ್
ಗುರುವಾರ, 12 ಆಗಸ್ಟ್ 2021 (17:06 IST)
ಬೆಂಗಳೂರು: ನಟಿ ರಾಧಿಕಾ ಪಂಡಿತ್-ರಾಕಿಂಗ್ ಸ್ಟಾರ್ ಯಶ್ ಜೋಡಿಗೆ ಇಂದು ವಿಶೇಷ ದಿನ. ಈ ದಿನದ ಬಗ್ಗೆ ರಾಧಿಕಾ ಪಂಡಿತ್ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಇಂದು ರಾಕಿಂಗ್ ಜೋಡಿ ಎಂಗೇಜ್ ಮೆಂಟ್ ಮಾಡಿಕೊಂಡ ದಿನ. ತಮ್ಮ ಪ್ರೀತಿಯ ವಿಚಾರವನ್ನು ಜಗಜಗ್ಗಾಹೀರು ಮಾಡಿದ ದಿನ. ಅಂದಿನ ನಿಶ್ಚಿತಾರ್ಥದ ವಿಡಿಯೋ ಶೇರ್ ಮಾಡಿಕೊಂಡಿರುವ ರಾಧಿಕಾ, ಈ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮತ್ತೆ ಆ ಪರ್ಫೆಕ್ಟ್ ದಿನವನ್ನು ನೆನೆಯಲು ಈ ವಿಡಿಯೋ ಹಂಚಿಕೊಂಡಿರುವೆ ಎಂದು ರಾಧಿಕಾ ಹೇಳಿದ್ದಾರೆ.
ಜೊತೆಗೆ ಆ ದಿನ ತಮ್ಮ ಈ ವಿಶೇಷ ಕ್ಷಣದಲ್ಲಿ ಭಾಗಿಯಾದ ಸ್ನೇಹಿತರು ತಮ್ಮ ಬಳಿಯಿರುವ ವಿಡಿಯೋವನ್ನು ರಾಧಿಕಾ ಪಂಡಿತ್ ಎಂದು ಟ್ಯಾಗ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವಂತೆ ರಾಧಿಕಾ ಮನವಿ ಮಾಡಿದ್ದಾರೆ.