ಬೆಳೆಯಲು ಮಾತ್ರ ಕನ್ನಡ ಬೇಕು, ಬೆಳೆದ ಮೇಲೆ ಮಕ್ಕಳಿಗೆ ಇಂಗ್ಲಿಷ್ ಸಾಕು: ಟ್ರೋಲ್ ಆದ ರಾಧಿಕಾ ಪಂಡಿತ್

Krishnaveni K

ಸೋಮವಾರ, 17 ಫೆಬ್ರವರಿ 2025 (09:21 IST)
ಬೆಂಗಳೂರು: ನಟಿ ರಾಧಿಕಾ ಪಂಡಿತ್ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಿದ ವಿಡಿಯೋವೊಂದರಲ್ಲಿ ಮಕ್ಕಳ ಜೊತೆ ಇಂಗ್ಲಿಷ್ ನಲ್ಲಿ ಮಾತನಾಡಿದ್ದಕ್ಕೆ ಟ್ರೋಲ್ ಆಗಿದ್ದಾರೆ. ಬೆಳೆದ ಮೇಲೆ ನಿಮಗೆ ಕನ್ನಡ ಬೇಡ ಇಂಗ್ಲಿಷ್ ಸಾಕಲ್ವಾ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ರಾಧಿಕಾ ವ್ಯಾಲೆಂಟೈನ್ಸ್ ಡೇ ನಿಮಿತ್ತ ಮಕ್ಕಳ ಜೊತೆಗೆ ಕೇಕ್ ತಯಾರಿಸುವ ವಿಡಿಯೋ ಹಂಚಿಕೊಂಡಿದ್ದರು. ಮಗ ಯಥರ್ವ್ ಮತ್ತು ಐರಾ ಪರಸ್ಪರ ಕಿತ್ತಾಡುತ್ತಲೇ ಕೇಕ್ ತಯಾರಿಸುವ ತುಂಟತನದ ವಿಡಿಯೋ ಹಂಚಿಕೊಂಡಿದ್ದಾರೆ.

ಈ ವೇಳೆ ಐರಾ ತನಗೆ ಕೇಕ್ ಮಿಕ್ಸ್ ಮಾಡಲು ಕೊಡದ ತಮ್ಮನಿಗೆ ಹೊಡೆಯುತ್ತಾಳೆ. ಬಳಿಕ ಯಥರ್ವ್ ಕೂಡಾ ಹೊಡೆಯುತ್ತಾನೆ. ಇಬ್ಬರೂ ಕಿತ್ತಾಡುವಾಗ ರಾಧಿಕಾ ಮಕ್ಕಳಿಗೆ ಅವಳಿಗೆ ಕೊಡು ಎಂದು ಇಂಗ್ಲಿಷ್ ನಲ್ಲೇ ಹೇಳುತ್ತಾರೆ. ಮಕ್ಕಳೂ ಇಂಗ್ಲಿಷ್ ನಲ್ಲೇ ಮಾತನಾಡುತ್ತಾರೆ.

ಇದೇ ಕಾರಣಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಮಕ್ಕಳ ಜೊತೆ ಕನ್ನಡದಲ್ಲಿ ಮಾತನಾಡಿ. ನೀವು ಕನ್ನಡ ನಟರು ಆದರೆ ಮಕ್ಕಳು ಹಾಲಿವುಡ್ ಮಂದಿ ಥರಾ ಯಾಕೆ ಮಾತಾಡ್ತಾರೆ ಎಂದು ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ