ದರ್ಶನ್ ಗೆ ವಿಶ್ ಮಾಡಿಲ್ಲ ಆದ್ರೂ ಬೇಕೆಂದೇ ಹೀಗೆ ಮಾಡಿದ್ರಾ ಪವಿತ್ರಾ ಗೌಡ

Sampriya

ಭಾನುವಾರ, 16 ಫೆಬ್ರವರಿ 2025 (15:48 IST)
Photo Courtesy X
ಬೆಂಗಳೂರು: ನಟ ದರ್ಶನ್ ಅವರು ಇಂದು 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟನಿಗೆ ಅಭಿಮಾನಿಗಳು, ಆಪ್ತವರ್ಗದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ ಶುಭಕೋರುತ್ತಿದ್ದಾರೆ.

ಇದೀಗ ದರ್ಶನ್ ಬರ್ತಡೇ ದಿನ ಪವಿತ್ರಾ ಗೌಡ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ ಪೋಸ್ಟ್ ಕುತೂಹಲ ಮೂಡಿಸಿದೆ.   ತನ್ನ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ವೇಳೆ ತಾಯಿ ಜತೆಗೆ ತೆಗೆಸಿಕೊಂಡ ಫೋಟೋವನ್ನು ಪವಿತ್ರಾಗೌಡ ರೀಲ್ಸ್‌ ಮಾಡಿ ಪೋಸ್ಟ್ ಹಾಕಿದ್ದಾರೆ.

ಲವ್‌ ಯೂ ಮಾ... ನನ್ನ ತಾಯಿ ದೊಡ್ಡ ಶಕ್ತಿ ಹಾಗೂ ಆಕೆ ನನ್ನನ್ನು ಇನ್ನಷ್ಟು ಸ್ಟ್ರಾಂಗ್ ಮಾಡುತ್ತಿದ್ದಾಳೆ. ನನ್ನ ಜೀವನದ ಏರಿಳಿತಗಳಲ್ಲಿ ಆಕೆ ದೊಡ್ಡ ಬಲವಾಗಿ ನಿಂತಿದ್ದಳು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ನಿನ್ನಾ ಚೆಲುವಿಂದ, ನಿನ್ನಾ ಒಲವಿಂದ ನನ್ನಲ್ಲಿ ನೀ ತಂದೇ ಆನಂದ, ಈ ಸಂತೋಷ, ಸೌಭಾಗ್ಯ ನಿನ್ನಿಂದ್ದ ಜೀವ ಹೂವಾಗಿದೆ, ಭಾವಾ ಜೇನಾಗಿದೆ, ಬಾಳು ಹಾಯಾಗಿದೆ, ನಿನ್ನ ಸೇರಿ ನಾನು ಎಂಬ ಹಾಡನ್ನು ಸೇರಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ