ಡಿ ಬಾಸ್‌ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿಸಿದ ಡೆವಿಲ್‌ ಟೀಸರ್‌: ದರ್ಶನ್‌ ಖಡಕ್‌ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ

Sampriya

ಭಾನುವಾರ, 16 ಫೆಬ್ರವರಿ 2025 (13:48 IST)
Photo Courtesy X
ಬೆಂಗಳೂರು:  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಇದು ಬರ್ತಡೇ ಸಂಭ್ರಮ. ಅವರು ಈ ಬಾರಿ ಅಭಿಯಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಆದರೆ, ಬಹುನಿರೀಕ್ಷಿತ ದಿ ಡೆವಿಲ್‌ ಚಿತ್ರದ ಎರಡನೇ ಟೀಸರ್‌ ರಿಲೀಸ್‌ ಮಾಡುವ ಮೂಲಕ ಫ್ಯಾನ್ಸ್‌ಗಳಲ್ಲಿ ಕಿಚ್ಚು ಹೆಚ್ಚಿಸಿದ್ಧಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಲವು ತಿಂಗಳು ಜೈಲು ವಾಸ ಅನುಭವಿಸಿ ಬಂದಿರುವ ದರ್ಶನ್‌ ಈ ಬಾರಿ ಸಿಂಪಲ್‌ ಆಗಿ ಕುಟುಂಬದ ಸದಸ್ಯರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ, ಅಭಿಮಾನಿಗಳನ್ನು ನಿರಾಸೆಗೊಳಿಸದೆ ಟೀಸರ್‌ ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ದೂಳೆಬ್ಬಿಸುತ್ತಿದೆ.

ಈ ಚಿತ್ರದಲ್ಲಿ ಡಿ ಬಾಸ್‌ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಮೈಚಳಿ ಬಿಟ್ಟು ದರ್ಶನ್ ಸಖತ್ ಫೈಟ್ ಮಾಡಿದ್ದಾರೆ. ಖಡಕ್‌ ಡೈಲಾಗ್ ಕೂಡ ಹೊಡೆದಿದ್ದಾರೆ. ಅವರ ಕ್ಯಾಸ್ಟೂಮ್‌ ಕೂಡ ಫುಲ್‌ ಡಿಫರೆಂಟ್‌ ಆಗಿದೆ. ಈ ಟೀಸರ್‌ ಕೇವಲ ಎರಡು ಗಂಟೆಯಲ್ಲಿ ಸುಮಾರು 7 ಲಕ್ಷ ಮಂದಿ ವೀಕ್ಷಣೆ ಮಾಡಿ, ಮೆಚ್ಚಿಕೊಂಡಿದ್ದಾರೆ.

ಶೇಕ್ ಆಗ್ತಿದೆ ಯೌಟ್ಯೂಬ್ ಅನ್ನೋ ಗ್ರೌಂಡು....ಇದನ್ನ ನೋಡಿದ್ಮೇಲೆ ಏಳುತ್ತೆ ನನ್ ಮೈಂಡು.....ಸಕ್ಕತಾಗಿದೆ ನಮ್ ಡಿ ಬಾಸ್ ಡೆವಿಲ್ ಸೌಂಡು.... ಎಂದು ಅಭಿಮಾನಿಯೊಬ್ಬರು ಟೀಸರ್‌ಗೆ ಕಮೆಂಟ್‌ ಮಾಡಿ ಶುಭ ಕೋರಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ