ಮಗುವಿಗಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುತ್ತಿರುವ ರಾಧಿಕಾ ಪಂಡಿತ್

ಶುಕ್ರವಾರ, 7 ಸೆಪ್ಟಂಬರ್ 2018 (14:26 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ತಾಯಿಯಾಗುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರಾಧಿಕಾ ಪಂಡಿತ್ ಆಗಾಗ ತಮ್ಮ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.


ಇದೀಗ ತಾಯಿಯಾಗುತ್ತಿರುವ ನಟಿ ಇನ್ನು ತಮ್ಮ ಫಿಟ್ ನೆಸ್ ಕಾಪಾಡಿಕೊಳ್ಳಲು ಡಯಟ್ ಮಾಡುತ್ತಿದ್ದಾರಾ ಎಂಬ ಗೊಂದಲ ಹಲವರಿರಬಹುದು. ಆದರೆ ರಾಧಿಕಾ ತಮ್ಮ ಮಗಿವಿಗಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೋವೊಂದನ್ನು ನಟಿ ತಮ್ಮ ಇನ್ ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ನಮ್ಮಿಬ್ಬರಿಗಾಗಿ ಆಹಾರ ಸೇವಿಸುತ್ತಿದ್ದೇನೆ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ.


ಫೋಟೋ ಅಪ್ಲೋಡ್ ಆದ 12 ಗಂಟೆಯಲ್ಲಿಯೇ 55 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಹಲವು ಅಭಿಮಾನಿಗಳು ಮರಿ  ಯಶ್ ಬರಲಿ ಅಂತಾ ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ಪುಟ್ಟ ರಾಧೆ ಬರಲಿ ಅಂತಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ