ರಾಧಿಕಾ ಪಂಡಿತ್ ಅಭಿಮಾನಿಗಳಿಗೊಂದು ಗುಡ್ ನ್ಯೂಸ್

ಬುಧವಾರ, 26 ಜೂನ್ 2019 (09:58 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮದುವೆಯಾದ ಬಳಿಕ ರಾಧಿಕಾ ಪಂಡಿತ್ ಅಭಿನಯಿಸಿದ ಏಕೈಕ ಸಿನಿಮಾವೆಂದರೆ ಆದಿಲಕ್ಷ್ಮಿ ಪುರಾಣ. ಈ ಸಿನಿಮಾ ಬಗ್ಗೆ ಏನೂ ಸುದ್ದಿಯೇ ಇಲ್ವಲ್ಲಾ ಎನ್ನುವವರಿಗೊಂದು ಗುಡ್ ನ್ಯೂಸ್ ಸಿಗುತ್ತಿದೆ.


ಚಿತ್ರ ಜುಲೈ 19 ರಂದು ರಿಲೀಸ್ ಆಗುತ್ತಿರುವುದಾಗಿ ಈಗಾಗಲೇ ಚಿತ್ರತಂಡ ಘೋಷಿಸಿತ್ತು. ಇದರ ಟೀಸರ್ ಈಗಾಗಲೇ ಬಿಡುಗಡೆಯಾಗಿ ಭಾರೀ ಲೈಕ್ಸ್ ಕೂಡಾ ಪಡೆದಿತ್ತು. ಅದಾದ ಬಳಿಕ ಸಿನಿಮಾ ಬಗ್ಗೆ ಯಾವುದೇ ಸುದ್ದಿ ಬಂದಿರಲಿಲ್ಲ.

ಇಂದು ಸಿನಿಮಾದ ಅಡಿಯೋ ರಿಲೀಸ್ ನಡೆಯಲಿದೆ. ಅನೂಪ್ ಭಂಡಾರಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಬೋಲ್ಡ್ ಹುಡುಗಿಯ ಪಾತ್ರ ಮಾಡಿರುವ ರಾಧಿಕಾಗೆ ನಿರೂಪ್ ಭಂಡಾರಿ ನಾಯಕರಾಗಿ ಅಭಿನಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ