‘ಜೇಮ್ಸ್’ಗೆ ಡಬ್ಬಿಂಗ್ ಮುಗಿಸಿದ ರಾಘವೇಂದ್ರ ರಾಜ್ ಕುಮಾರ್
ಪುನೀತ್ ಕೊನೆಯದಾಗಿ ನಟಿಸಿದ್ದ ಸಿನಿಮಾದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶಿವರಾಜ್ ಕುಮಾರ್ ತಮ್ಮ ಪಾತ್ರದ ಜೊತೆಗೆ ಪುನೀತ್ ಪಾತ್ರಕ್ಕೂ ತಮ್ಮ ಧ್ವನಿ ನೀಡಿದ್ದಾರೆ.
ಇದೀಗ ರಾಘವೇಂದ್ರ ರಾಜ್ ಕುಮಾರ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಮಾರ್ಚ್ 17 ರಂದು ಚಿತ್ರ ಬಿಡುಗಡೆಯಾಗುವ ಸಾಧ‍್ಯತೆಯಿದೆ.