ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 2 ಬರುತ್ತಾ ಅಂದರೆ ಹೀಗೆ ಹೇಳೋದಾ

Krishnaveni K

ಮಂಗಳವಾರ, 14 ಅಕ್ಟೋಬರ್ 2025 (10:31 IST)
ಬೆಂಗಳೂರು: ಕಾಂತಾರ ಚಾಪ್ಟರ್ 1 ಬ್ಲಾಕ್ ಬ್ಲಸ್ಟರ್ ಹಿಟ್ ಆದ ಮೇಲೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಎಲ್ಲೇ ಹೋದ್ರೂ ಕಾಂತಾರ ಚಾಪ್ಟರ್ 2 ಬರುತ್ತಾ ಎಂದು ಕೇಳುತ್ತಿದ್ದಾರೆ. ಇದರ ಬಗ್ಗೆ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ.

ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಈ ಬಾರಿ ರಿಷಬ್ ಶೆಟ್ಟಿ ಮುಖ್ಯ ಅತಿಥಿಯಾಗಿ ಹೋಗಿದ್ದರು. ಅವರನ್ನು ಭರ್ಜರಿ ಸ್ವಾಗತ ಮಾಡಿ ವೇದಿಕೆಗೆ ಕರೆಸಿಕೊಳ್ಳಲಾಯಿತು. ಈ  ವೇಳೆ ನಿರೂಪಕರು ಕಾಂತಾರ ಚಾಪ್ಟರ್ 2 ಬರುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ರಿಷಬ್ ಶೆಟ್ಟಿ ‘ಈಗ ನನ್ನಲ್ಲಿ ಯಾರಾದ್ರೂ ನೆಕ್ಸ್ಟ್ ಏನು ಎಂದು ಕೇಳಿದ್ರೆ ನೆಕ್ಸ್ಟ್ ರೆಸ್ಟ್ ಎಂದೇ ನಾನು ಹೇಳೋದು’ ಎಂದಿದ್ದಾರೆ. ‘ನನಗೆ ಕೆರ್ಕೊಳ್ಳೋಕೂ ಪುರುಸೊತ್ತು ಸಿಗಬಾರದು ಹಾಗೆ ಕೆಲಸ ಕೊಡು ದೇವರೇ ಎಂದು ಬೇಡಿಕೊಳ್ಳುತ್ತಿದ್ದೆ. ಆ ವಿಚಾರದಲ್ಲಿ ನನಗೆ ಖುಷಿಯಿದೆ’ ಎಂದಿದ್ದಾರೆ. ಆದರೆ ಕಾಂತಾರ ಚಾಪ್ಟರ್ 2 ಸದ್ಯಕ್ಕಿಲ್ಲ ಎಂದು ಸುಳಿವು ನೀಡಿದ್ದಾರೆ.

ಕಾಂತಾರ ಚಾಪ್ಟರ್ 1 ಸಿನಿಮಾದ ಕೊನೆಯಲ್ಲಿ ಇನ್ನೊಂದು ದಂತಕತೆ ಎನ್ನುವ ಮೂಲಕ ಮೂರನೇ ಭಾಗ ಇದೆ ಎಂದು ಸುಳಿವು ನೀಡಿತ್ತು ಚಿತ್ರತಂಡ. ಆದರೆ ಸದ್ಯಕ್ಕೆ ರಿಷಬ್ ಬೇರೆ ನಾಲ್ಕು ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಅದಾದ ಬಳಿಕವೇ ಕಾಂತಾರ ಮೂರನೇ ಭಾಗದ ಬಗ್ಗೆ ಯೋಚಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ