ಇತಿಹಾಸ ಸೃಷ್ಟಿಸಿದ ರಾಗಿಣಿ ದ್ವಿವೇದಿ ’ಕಿಚ್ಚು’

ಗುರುವಾರ, 22 ಡಿಸೆಂಬರ್ 2016 (12:13 IST)
ಸ್ಯಾಂಡಲ್‌ವುಡ್ ಕಿಚ್ಚನಿಗೂ ರಾಗಿಣಿ ದ್ವಿವೇದಿಗೂ ಈಗ ಅಷ್ಟಕ್ಕಷ್ಟೆ. ಆದರೆ ರಾಗಿಣಿ ಕಿಚ್ಚೆಬ್ಬಿಸಲು ಮತ್ತೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿದ್ದಾರೆ. ಕಿವುಡ ಮತ್ತು ಮೂಕ ನಟ ಧ್ರುವ ಶರ್ಮಾ ಮತ್ತು ಅಭಿನಯಾ ಮುಖ್ಯಭೂಮಿಕೆಯಲ್ಲಿರುವ ಚಿತ್ರದಲ್ಲಿ ರಾಗಿಣಿ ಅವರದು ಪ್ರಮುಖ ಪಾತ್ರ.
 
ವಿಶೇಷ ಎಂದರೆ ಚಿತ್ರದ ನಾಯಕಿ ಅಭಿನಯಾ ಸಹ ಕಿವುಡು ಮತ್ತು ಮೂಕ ತಾರೆ. ಇಬ್ಬರು ದಿವ್ಯಾಂಗರನ್ನು ಹಾಕಿಕೊಂಡು ಚಿತ್ರವನ್ನು ಮಾಡುತ್ತಿರುವುದು ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದೆ. ನಿರ್ದೇಶಕ ಸಾಹಸಕ್ಕೂ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. 
 
ಅಭಿನಯಾ ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರ ಹುಡುಗರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರದೀಪ್ ರಾಜ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದು. ಈ ಹಿಂದೆ ಇವರು ಕಿರಾತಕ, ಅಂಜದ ಗಂಡು, ಮಿ.420, ಬೆಂಗಳೂರು-560094 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
 
ಈಗ ಕಿಚ್ಚು ಚಿತ್ರ ಕೈಗೆತ್ತಿಕೊಂಡಿದ್ದು ರಾಗಿಣಿ ಪೋಷಕ ಪಾತ್ರದಲ್ಲಿ ಕಿಚ್ಚೆಬ್ಬಿಸಲಿದ್ದಾರೆ. ಉಳಿದ ಪಾತ್ರವರ್ಗದಲ್ಲಿ ಸಾಯಿಕುಮಾರ್, ಸುಚೇಂದ್ರ ಪ್ರಸಾದ್ ಮುಂತಾದ ನಟರು ಇರುವುದು ’ಕಿಚ್ಚು’ ಚಿತ್ರದ ವಿಶೇಷ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ