ರಾಗಿಣಿ ದ್ವಿವೇದಿಗೆ ಇಂದು ಬಿಡುಗಡೆಯ ಭಾಗ್ಯ ಸಾಧ್ಯತೆ

ಸೋಮವಾರ, 25 ಜನವರಿ 2021 (08:03 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಂದ ಜಾಮೀನು ಪಡೆದರೂ ಕಾನೂನು ಪ್ರಕ್ರಿಯೆ ಮುಗಿಯದ ಕಾರಣ ಜೈಲಿನಲ್ಲೇ ಇರುವ ರಾಗಿಣಿ ದ್ವಿವೇದಿಗೆ ಇಂದು ಬಿಡುಗಡೆಯ ಭಾಗ್ಯ ಸಿಗುವ ಸಾಧ್ಯತೆಯಿದೆ.


ನಟಿ ರಾಗಿಣಿಯ ಜಾಮೀನು ತೀರ್ಪು ಸೆಷನ್ಸ್ ಕೋರ್ಟ್ ಗೆ ತಲುಪಿದೆ. ಅದರ ಕಾನೂನು ಪ್ರಕ್ರಿಯೆ ಮುಗಿಸಲು ನಿನ್ನೆ ಭಾನುವಾರವಾದ್ದರಿಂದ ಸಾಧ್ಯವಾಗಿರಲಿಲ್ಲ. ಇಂದು ಅವೆಲ್ಲವೂ ಮುಗಿದು ರಾಗಿಣಿಯ ಜೈಲು ವಾಸ ಅಂತ್ಯವಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ