ಗಜರಾಜನ ಸುಟ್ಟು ಕೊಂದು ಹಾಕಿದವರ ವಿರುದ್ಧ ಸಂಸದೆ ಸುಮಲತಾ ಆಕ್ರೋಶ

ಭಾನುವಾರ, 24 ಜನವರಿ 2021 (09:41 IST)
ಬೆಂಗಳೂರು: ಕೇರಳದಲ್ಲಿ ಗರ್ಭಿಣಿ ಆನೆಗೆ ಸ್ಪೋಟಕ ತಿನಿಸಿ ಹತ್ಯೆ ಮಾಡಿದ ರೀತಿಯಲ್ಲೇ ತಮಿಳುನಾಡಿನಲ್ಲಿ ದುಷ್ಕರ್ಮಿಗಳು ಕಾಡಾನೆಯೊಂದಕ್ಕೆ ಬೆಂಕಿ ಹಚ್ಚಿ ಅದರ ಸಾವಿಗೆ ಕಾರಣವಾದ ಘಟನೆ ನಡೆದಿದೆ. ಈ ಪೈಶಾಚಿಕ ಕೃತ್ಯಕ್ಕೆ ಸಂಸದೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಮಿಳುನಾಡಿನ ಮಾಸಿನಗುಡಿಯಲ್ಲಿ ಮುಗ್ಧ ಆನೆಯ ಕಿವಿಯನ್ನು ಸುಟ್ಟು ಹಾಕಿದ ಕಾರಣ ನೋವು ತಾಳಲಾರದೇ ಆನೆ ಸಾವನ್ನಪ್ಪಿತ್ತು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸುಮಲತಾ ಈ ಪೈಶಾಚಿಕ ಕೃತ್ಯ ನಡೆಸಿದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ. ಆನೆಯ ಧಾರುಣ ಸಾವು ನೋಡಿ ಅರಣ್ಯ ಸಿಬ್ಬಂದಿ ಅದರ ಸೊಂಡಿಲು ಹಿಡಿದು ಅಳುವ ದಯನೀಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ