ಏನೇ ಕೇಳಿದ್ರೂ, ಗೊತ್ತಿಲ್ಲ, ಮರೆತು ಹೋಗಿದೆ ಎನ್ನುತ್ತಿರುವ ರಾಗಿಣಿ ದ್ವಿವೇದಿ
ಶುಕ್ರವಾರ, 11 ಸೆಪ್ಟಂಬರ್ 2020 (10:15 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ವಿಚಾರಣೆ ವೇಳೆ ಪೊಲೀಸರು ಏನೇ ಕೇಳಿದರೂ ಸರಿಯಾಗಿ ಬಾಯಿ ಬಿಡ್ತಿಲ್ಲ.
ಅವರ ವ್ಯಾಟ್ಸಪ್ ಸಂದೇಶಗಳ ಬಗ್ಗೆ ಕೇಳಿದರೆ ನನಗೆ ಗೊತ್ತಿಲ್ಲ. ಮರೆತು ಹೋಗಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ರಾಗಿಣಿ ಬಳಿಕ ಸಂಜನಾ ಕೂಡಾ ಅದೇ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರನ್ನೂ ಮಹಿಳಾ ಕೇಂದ್ರದಿಂದ ಎಫ್ ಎಸ್ಎಲ್ ಗೆ ಕರೆದೊಯ್ದು ವಿಚಾರಣೆಗೆ ಕರೆದೊಯ್ಯಲು ಪೊಲೀಸರು ತೀರ್ಮಾನಿಸಿದ್ದಾರೆ.