ಡ್ರಗ್ ಮಾಫಿಯಾ ಕೇಸ್: ನಟಿ ಸಂಜನಾ ಮೊಬೈಲ್ ನಲ್ಲಿ ಡಿಲೀಟ್ ಆದ ಡೀಟೈಲ್ ಪಡೆಯಲು ಸಿಸಿಬಿ ಪ್ರಯತ್ನ

ಬುಧವಾರ, 9 ಸೆಪ್ಟಂಬರ್ 2020 (12:02 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಬಂಧಿತರಾಗಿರುವ ನಟಿ ಸಂಜನಾ ಮೊಬೈಲ್ ನಲ್ಲಿ ಡಿಲೀಟ್ ಆದ ಮಾಹಿತಿಗಳನ್ನು ಮರಳಿ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ.


ನಟಿಯ ಮೊಬೈಲ್ ನಲ್ಲಿ ಡಿಲೀಟ್ ಆದ ಅಂಶಗಳನ್ನು ರಿಟ್ರೀವ್ ಮಾಡಲು ತಾಂತ್ರಿಕ ತಂಡ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಡ್ರಗ್ ಪೆಡ್ಲರ್ ಗಳಾದ ರಾಹುಲ್ ಶೆಟ್ಟಿ, ರವಿಶಂಕರ್ ಮೊಬೈಲ್ ನಲ್ಲಿ ಡಿಲೀಟ್ ಮಾಡಲಾಗಿದ್ದ ಮಾಹಿತಿಗಳನ್ನು ಯಶಸ್ವಿಯಾಗಿ ಮರಳಿ ಪಡೆಯಲಾಗಿತ್ತು. ಇದೀಗ ನಟಿಯರ ಮೊಬೈಲ್ ನಿಂದಲೂ ಡಿಲೀಟ್ ಆದ ಮಾಹಿತಿಗಳನ್ನು ಮರಳಿ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ. ಸಾಕ್ಷ್ಯ ನಾಶ ಮಾಡಲು ನಟಿಯರು ಮೊಬೈಲ್ ಮಾಹಿತಿಗಳನ್ನು ಡಿಲೀಟ್ ಮಾಡಿರುವ ಸಾಧ‍್ಯತೆಯಿದ್ದು, ಅದನ್ನು ಮರಳಿ ಪಡೆದರೆ ಇಬ್ಬರ ವಿರುದ್ಧದ ಆರೋಪಕ್ಕೆ ಮತ್ತಷ್ಟು ಸಾಕ್ಷ್ಯಗಳು ಸಿಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ