ಸಾಂತ್ವನ ಕೇಂದ್ರದಲ್ಲಿ ರಾಗಿಣಿ ರಂಪಾಟ: ಸೊಳ್ಳೆ ಕಾಟ ಎಂದು ರಗಳೆ
ಭಾನುವಾರ, 6 ಸೆಪ್ಟಂಬರ್ 2020 (09:03 IST)
ಬೆಂಗಳೂರು: ಬೆನ್ನು ನೋವಿನ ನೆಪ ಹೇಳಿ ನಿನ್ನೆ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ ನಟಿ ರಾಗಿಣಿ ದ್ವಿವೇದಿ ಇಂದು ಕಡ್ಡಾಯವಾಗಿ ವಿಚಾರಣೆ ಎದುರಿಸಲೇಬೇಕಾಗಿದೆ.
ಡ್ರಗ್ ಮಾಫಿಯಾ ಆರೋಪದಲ್ಲಿ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ರಾಗಿಣಿ ಮೊನ್ನೆ ಸರಿಯಾಗಿ ಉತ್ತರಿಸಿರಲಿಲ್ಲ. ನಿನ್ನೆ ಅನಾರೋಗ್ಯದ ನೆಪವೊಡ್ಡಿದ್ದರು. ಇಂದು ಬೆಳ್ಳಂ ಬೆಳಿಗ್ಗೆ ಸಾಂತ್ವನ ಕೇಂದ್ರದಲ್ಲಿ ವ್ಯವಸ್ಥೆ ಸರಿಯಿಲ್ಲ. ರಾತ್ರಿಯಿಡೀ ಸೊಳ್ಳೆ ಕಾಟ, ಊಟ-ತಿಂಡಿ ಸರಿ ಇಲ್ಲ ಎಂದೆಲ್ಲಾ ರಾಗಿಣಿ ರಗಳೆ ಮಾಡಿದ್ದಾರೆ ಎನ್ನಲಾಗಿದೆ.
ಈ ನಡುವೆ ರಾಗಿಣಿ ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಂದು ರಜೆಯಿರುವ ಹಿನ್ನಲೆಯಲ್ಲಿ ನಾಳೆ ವಿಚಾರಣೆಯಾಗುವ ಸಾಧ‍್ಯತೆಯಿದೆ.