ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ರಾಜ್‌ ಬಿ ಶೆಟ್ಟಿ, ಅನುಶ್ರೀ, ಕಿರಣ್‌ ರಾಜ್

Sampriya

ಗುರುವಾರ, 30 ಜನವರಿ 2025 (14:27 IST)
Photo Courtesy X
ಪ್ರಯಾಗ್‌ರಾಜ್‌: 2025ರ ಪ್ರಯಾಗರಾಜ್‌ ಮಹಾಕುಂಭಮೇಳದಲ್ಲಿ ನಿರೂಪಕಿ ಅನುಶ್ರೀ, ನಟ ನಿರ್ದೇಶಕ ರಾಜ್‌ಬಿ ಶೆಟ್ಟಿ,  ನಿರ್ದೇಶಕ ಕಿರಣ್‌ ರಾಜ್ ಅವರು ಪವಿತ್ರ ಸ್ನಾನ ಮಾಡಿದ್ದಾರೆ.  ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೋಟೋದಲ್ಲಿ ರಾಜ್‌ ಬಿ ಶೆಟ್ಟಿ ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಹಣೆಯಲ್ಲಿ  ಶ್ರೀರಾಮ್‌ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ  ರಾಜ್‌ ಬಿ ಶೆಟ್ಟಿ, ಬೆಂಗಳೂರಿನ ಸ್ನೇಹಿತರ ಜತೆ ಕುಂಭಮೇಳಕ್ಕೆ ಬಂದಿದ್ದೇವೆ ಎಂದರು.

ಇನ್ನೂ ಕೋಟ್ಯಂತರ ಜನರು ಇಲ್ಲಿ ಭಾಗವಹಿಸುತ್ತಿದ್ದಾರೆ. ಇಷ್ಟೊಂದು ಜನರನ್ನು ನಿರ್ವಹಣೆ ಮಾಡುವುದು ಬಹಳ ಕಷ್ಟ. ಪೊಲೀಸರು ಬಹಳ ಚೆನ್ನಾಗಿ ಕೆಲಸ ಮಾಡಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಹಳ ದೂರ ನಡೆದುಕೊಂಡೇ ಪವಿತ್ರ ಸ್ನಾನ ಮಾಡಲು ಬರಬೇಕು. ಆಧ್ಯಾತ್ಮಿಕವಾಗಿ ಇದೊಂದು ಪವಿತ್ರ ಕಾರ್ಯಕ್ರಮ. ಇಂದು ನಾವು ಅಖಾಡಗಳಿಗೆ ಭೇಟಿ ನೀಡಲಿದ್ದೇವೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ