ಬೆಂಗಳೂರು: ನನ್ನ ಮೊದಲ ಸಿನಿಮಾ ಒಂದು ಮೊಟ್ಟೆಯ ಕಥೆ ಮಾಡಿದಾಗ ನಿನ್ನ ಹೀರೋ ಆಗಿ ಯಾರೋ ನೋಡುತ್ತಾರೆಂಬ ಮಾತನ್ನು ಹೇಳಿದ್ದರು ಎಂದು ನಟ, ನಿರ್ದೇಶಕ, ನಿರ್ಮಾಪಕ ರಾಜ್ ಬಿ ಶೆಟ್ಟಿ ಮೊದಲ ಸಿನಿಮಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಸದ್ದಿಲ್ಲದೆ ಥಿಯೇಟರ್‌ಗೆ ಬಂದು ಇದೀಗ ಗಡಿದಾಟಿ ಸದ್ದು ಮಾಡುತ್ತಿರುವ ಸು ಫ್ರಮ್ ಸೋ ಸಿನಿಮಾಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇರಳದಲ್ಲೂಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌ನೊಂದಿಗೆ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಸಿನಿಮಾ ಯಶಸ್ವಿನ ಬಳಿಕ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಒಂದು ಮೊಟ್ಟೆಯ ಕತೆ ಸಿನಿಮಾ ಸಂದರ್ಭದಲ್ಲಿ ಬಂದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಒಂದು ಮೊಟ್ಟೆಯ ಕಥೆಯಲ್ಲಿ ಸಿನಿಮಾದಲ್ಲಿ ನಾನು ಹೀರೋ ಆಗಿ ಅಭಿನಯಿಸುತ್ತಿದ್ದೇನೆ ಎಂದಾಗ ಹೀರೋ ಆಗಿ ನಿನ್ನನ್ನು ಯಾರು ನೋಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದರು. ಆದರೆ ಆ ಸಿನಿಮಾದ ಪಾತ್ರಕ್ಕೆ ನನ್ನ ಲುಕ್ ಬೇಕಾಗಿತ್ತು. ನಾನು ಹೀರೋ ಆಗಿ ನೋಡ್ಬೇಕು ಅಂತ ಇರಲಿಲ್ಲ. ಆ ಪಾತ್ರದ ಲುಕ್‌ಗೆ ಬೇರೆ ಯಾರು ಸಿಗದೇ ಇದ್ದಾಗ ನಾನೇ ಅಭಿನಯಿಸಬೇಕಾಯಿತು.
ಆ ಸಿನಿಮಾ ನೋಡಿ ಹಂಚಿಕೆದಾರರು ಈ ಸಿನಿಮಾ ವರ್ಕ್ ಆಗಲ್ಲ ಎಂದಿದ್ದರು. ಆದರೇ ಪ್ರೇಕ್ಷಕರು ಅದನ್ನು ಸುಳ್ಳು ಎಂದು ನಿರೂಪಿಸಿದರು. ಆ ಸಿನಿಮಾದಿಂದ ಕಲಿತಿದ್ದು ಏನಂದ್ರೆ ನಾನು ಸಿನಿಮಾ ಮಾಡಿದಾಗ ಪ್ರೇಕ್ಷಕರಿಗೆ ಮೋಸ ಮಾಡಬಾರದೆಂದು.
ಹಾಗಾಗಿ ನನಗೆ ನಿಜಜೀವನದ ಅನುಭವದ ಕಥೆಗಳನ್ನು ತೆರೆ ಮೇಲೆ ತರುತ್ತೇವೆ ಎಂದರು.