ಮಹೇಶ್ ಬಾಬು ಜೊತಗಿನ ಸಿನಿಮಾಗೆ ಚಾಲನೆ ನೀಡಿದ ರಾಜಮೌಳಿ

ಗುರುವಾರ, 26 ಮೇ 2022 (11:10 IST)
ಹೈದರಾಬಾದ್: ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ಸ್ಟಾರ್ ನಿರ್ದೇಶಕ ರಾಜಮೌಳಿ ಮುಂದಿನ ಸಿನಿಮಾ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ.

ಸದ್ಯಕ್ಕೆ ಮಹೇಶ್ ಬಾಬು ಸರ್ಕಾರುವಾರಿ ಪಾಟ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಫ್ಯಾಮಿಲಿ ಸಮೇತ ವಿದೇಶ ಪ್ರವಾಸ ಮಾಡಿದ್ದರು. ಅತ್ತ ರಾಜಮೌಳಿ ಕೂಡಾ ಆರ್ ಆರ್ ಆರ್ ಸಿನಿಮಾ ಯಶಸ್ಸಿನ ಬಳಿಕ ವಿದೇಶ ಪ್ರವಾಸ ಮಾಡಿದ್ದರು.

ಇದೀಗ ಮರಳಿರುವ ರಾಜಮೌಳಿ ಮಹೇಶ್ ಬಾಬು ಜೊತೆಗಿನ ಸಿನಿಮಾ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಸದ್ಯದಲ್ಲೇ ಚಿತ್ರದ ಬಗ್ಗೆ ಅಧಿಕೃತ ಪ್ರಕಟಣೆ ನೀಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ