ರಜನಿಕಾಂತ್‌ಗೆ ಹಾಜಿಮಸ್ತಾನ್ ಪುತ್ರನಿಂದ ಲೀಗಲ್ ನೋಟಿಸ್ ಜಾರಿ

ಶನಿವಾರ, 13 ಮೇ 2017 (15:37 IST)
ಚಲನಚಿತ್ರದಲ್ಲಿ ಹಾಜಿ ಮಸ್ತಾನ್‌ರನ್ನು ಭೂಗತ ದೊರೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಹಾಜಿಮಸ್ತಾನ್ ಪುತ್ರ ಎಂದು ಹೇಳಿಕೊಂಡಿರುವ ಸುಂದರ್ ಶೇಖರ್, ರಜನಿಕಾಂತ್ ಅವರಿಗೆ ಕೋರ್ಟ್‌ನಿಂದ ನೋಟಿಸ್ ಜಾರಿ ಮಾಡಿದ್ದಾರೆ.   
 
ರಜನಿಕಾಂತ್ ತಮ್ಮ ಮುಂದಿನ ಪಾ ರಂಜಿತ್ ಚಿತ್ರದಲ್ಲಿ 1926 ರಿಂದ 1994 ರವರೆಗೆ ಭೂಗತ ದೊರೆಯಾಗಿದ್ದ ಹಾಜಿ ಮಸ್ತಾನ್ ಪಾತ್ರವನ್ನು ಮಾಡಲಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. 
 
ಗಾಡ್‌ಫಾದರ್, ರಾಷ್ಟ್ರಮಟ್ಟದ ರಾಜಕಾರಣಿಯಾಗಿದ್ದ ಹಾಜಿ ಮಸ್ತಾನ್‌ರನ್ನು ಸ್ಮಗಲರ್ ಮತ್ತು ಭೂಗತ ದೊರೆ ಎಂದು ಸಿನೆಮಾದಲ್ಲಿ ತೋರಿಸುತ್ತಿರುವುದು ಅವರಿಗೆ ತೋರಿರುವ ಅಗೌರವವಾಗಿದೆ. ಇದು ಸ್ವೀಕಾರ್ಹವಲ್ಲ ಎಂದು ಮಸ್ತಾನ್ ಪುತ್ರ ರಜನಿಕಾಂತ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. 
 
ಹಾಜಿ ಮಸ್ತಾನ್ ಹಿಂದೆ ದೊಡ್ಡ ರಾಜಕೀಯ ಪಕ್ಷವಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಮಸ್ತಾನ್‌ರನ್ನು ಸ್ಮಗಲರ್ ಮತ್ತು ಭೂಗತ ದೊರೆ ಎಂದು ತೋರಿಸುತ್ತಿರುವುದಕ್ಕೆ ಆಕ್ರೋಶಗೊಂಡಿದ್ದಾರೆ. ಒಂದು ವೇಳೆ ಇಂತಹ ಪ್ರಯತ್ನಗಳು ನಡೆದಲ್ಲಿ ಮುಂದಾಗುವ ಕಾನೂನು ಹೋರಾಟ ಮತ್ತು ಇತರ ತೊಂದರೆಗಳಿಗೆ ನೀವೇ ಹೊಣೆಯಾಗುತ್ತೀರಿ. ಇದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.  
 
ಶ್ರೀ ಹಾಜಿ ಮಸ್ತಾನ್ ಜೀವನಶೈಲಿ ಮೇಲೆ ಚಲನಚಿತ್ರಗಳನ್ನು ತಯಾರಿಸಲು ನಿಜವಾಗಿಯೂ ಆಸಕ್ತಿ ಇದ್ದರೆ, ನಾನು ನನ್ನ ದೇವರ ಮೇಲೆ ಬಯೋಪಿಕ್ ಮಾಡಲು ಆಸಕ್ತಿ ಹೊಂದಿದ್ದೇನೆ. ನಾನು  ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್ ಅಜೀವಿತಾವಧಿ ಸದಸ್ಯನಾಗಿದ್ದೇನೆ ಎಂದು ಹಾಜಿ ಮಸ್ತಾನ್ ಪುತ್ರ ಸುಂದರ್ ಶೇಖರ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ