ಗರಿಷ್ಠ ತೆರಿಗೆ ಕಟ್ಟಿ ಅವಾರ್ಡ್ ಪಡೆದ ಸೂಪರ್ ಸ್ಟಾರ್ ರಜನೀಕಾಂತ್
ತಮಿಳುನಾಡಿನಲ್ಲಿ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಾಗಿರುವ ರಜನಿ ತೆರಿಗೆ ಕಟ್ಟುವ ವಿಚಾರದಲ್ಲೂ ಮುಂದಿದ್ದಾರೆ. ತೆರಿಗೆ ಕಟ್ಟುವ ವಿಚಾರದಲ್ಲಿ ರಜನಿ ಪ್ರಾಮಾಣಿಕವಾಗಿದ್ದಾರೆ. ಅವರ ಈ ಪ್ರಾಮಾಣಿಕತೆ ಮೆಚ್ಚಿ ಆದಾಯ ತೆರಿಗೆ ಇಲಾಖೆ ಪ್ರಶಸ್ತಿ ಫಲಕ ನೀಡಿ ಗೌರವಿಸಿದೆ.
ತಂದೆಯ ಪರವಾಗಿ ರಜನಿ ಪುತ್ರಿ ಐಶ್ವರ್ಯಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರ ಪ್ರಾಮಾಣಿಕತೆಗೆ ಈ ಗೌರವ ಸಂದಿದೆ.