ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದ ನಟ ರಾಜು ಶ್ರೀವಾಸ್ತವ ಇನ್ನಿಲ್ಲ
ರಾಜು ಶ್ರೀವಾಸ್ತವ ಹೃದಯಾಘಾತಕ್ಕೊಳಗಾದ ವಿಚಾರ ಭಾರೀ ಸದ್ದು ಮಾಡಿತ್ತು. ಥೇಟ್ ಪುನೀತ್ ರಾಜ್ ಕುಮಾರ್ ರಂತೇ ಜಿಮ್ ಮಾಡುತ್ತಿದ್ದಾಗ ರಾಜು ಶ್ರೀವಾಸ್ತವ ಕುಸಿದು ಬಿದ್ದಿದ್ದರು. ಆಗಸ್ಟ್ 10 ರಂದು ಈ ಘಟನೆ ನಡೆದಿತ್ತು.
ಇಷ್ಟು ದಿನ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇದೀಗ ಕೊನೆಗೂ ಜೀವನ್ಮರಣದ ಹೋರಾಟದಲ್ಲಿ ಸೋತು ಕೊನೆಯುಸಿರೆಳೆದಿದ್ದಾರೆ. ನಾಳೆ ಅವರ ಅಂತ್ಯಕ್ರಿಯೆ ನೆರವೇರಲಿದೆ.