ಮಕ್ಕಳಿಗೆ ಇಷ್ಟವಾಗುವ ಮತ್ತೊಂದು ಸಿನಿಮಾ ಘೋಷಿಸಿದ ರಕ್ಷಿತ್ ಶೆಟ್ಟಿ
ನವ ನಿರ್ದೇಶಕರಿಗೆ ಅವಕಾಶ ಕೊಡುವ ರಕ್ಷಿತ್ ಈ ಬಾರಿ ಮತ್ತೆ ಹೊಸಬರಿಗೆ ಮಣೆ ಹಾಕಿದ್ದಾರೆ. ಸುಮಂತ್ ಭಟ್ ನಿರ್ದೇಶಿಸಲಿರುವ ಹುಡುಗನೊಬ್ಬನ ಭಾವನಾತ್ಮಕ ಪಯಣದ ಕತೆ ಹೊಂದಿರುವ ಸಿನಿಮಾಗೆ ರಕ್ಷಿತ್ ಬಂಡವಾಳ ಹಾಕಲಿದ್ದಾರೆ. ಈ ಸಿನಿಮಾಗೆ ಮಿಥ್ಯ ಎಂದು ಹೆಸರಿಡಲಾಗಿದೆ.
ಒಂದು ಎಳೇ ಹೃದಯ ನೋವನ್ನು ಹೇಗೆ ತಡೆದುಕೊಳ್ಳುತ್ತದೆ? ಈ ಪ್ರಶ್ನೆಗೆ ಈ ಕತೆ ಉತ್ತರವಾಗಲಿದೆ. ಇದು ಭಾವನಾತ್ಮಕ ಕತೆ. ಈ ಕತೆಯನ್ನು ಕೇಳುವಾಗ ನನ್ನ ಹೃದಯಕ್ಕೆ ತಟ್ಟಿತು ಎಂದು ರಕ್ಷಿತ್ ಹೇಳಿಕೊಂಡಿದ್ದಾರೆ. ಆ ಮೂಲಕ ಮತ್ತೊಂದು ವಿಭಿನ್ನ ಸಿನಿಮಾವನ್ನು ತೆರೆಗೆ ತರಲಿದ್ದಾರೆ.