ಧೀರನ್ ಸಿನಿಮಾಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್
ಪುನೀತ್ ಅಳಿಯ ಧೀರನ್ ರಾಮ್ ಕುಮಾರ್ ನಾಯಕರಾಗಿರುವ ಶಿವ 143 ಸಿನಿಮಾದ ಕ್ಯಾರೆಕ್ಟರ್ ಇಂಟ್ರೋ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ನಾಳೆ ಬೆಳಿಗ್ಗೆ 11.00 ಗಂಟೆಗೆ ಚಿತ್ರದ ಪಾತ್ರವರ್ಗದ ಬಗ್ಗೆ ವಿಡಿಯೋ ಒಂದು ಲಾಂಚ್ ಆಗಲಿದ್ದು, ಇದನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆಗೊಳಿಸಲಿದ್ದಾರೆ. ಈ ಮೂಲಕ ತಮ್ಮ ಕುಟುಂಬದ ಕುಡಿಯ ಸಿನಿಮಾಗೆ ಸಾಥ್ ಕೊಡಲಿದ್ದಾರೆ.