ರಶ್ಮಿಕಾ ಕುರಿತು ಮೆಚ್ಚುಗೆ ಮಾತನಾಡಿದ ರಕ್ಷಿತ್ ಶೆಟ್ಟಿ
ಎಲ್ಲರಿಗೂ ಗೊತ್ತಿರುವ ಹಾಗೆ ರಶ್ಮಿಕಾರನ್ನು ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕರೆತಂದಿದ್ದ ರಕ್ಷಿತ್ ಬಳಿಕ ಅವರೊಂದಿಗೆ ನಿಜ ಜೀವನದಲ್ಲೂ ಜೋಡಿಯಾಗಲು ಹೊರಟಿದ್ದರು. ಆದರೆ ಕಾರಣಾಂತರಗಳಿಂದ ಅವರ ಎಂಗೇಜ್ ಮೆಂಟ್ ಮುರಿದುಬಿತ್ತು.
ಹೀಗಿದ್ದರೂ ರಶ್ಮಿಕಾ ಬಗ್ಗೆ ಆಗಾಗ ರಕ್ಷಿತ್ ಗೆ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ಇದೀಗ ತಮಿಳು ಯೂ ಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ನೀವು ಚಿತ್ರರಂಗಕ್ಕೆ ಕರೆತಂದ ರಶ್ಮಿಕಾ ಬೆಳವಣಿಗೆ ಬಗ್ಗೆ ಏನನಿಸುತ್ತದೆ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ರಕ್ಷಿತ್ ‘ರಶ್ಮಿಕಾ ಯಶಸ್ಸು ನನಗೆ ಖುಷಿಕೊಟ್ಟಿದೆ. ಆಕೆ ಕನಸು ನನಸು ಮಾಡಿಕೊಂಡ ಪರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ’ ಎಂದಿದ್ದಾರೆ.