ರಕ್ಷಿತ್ ಶೆಟ್ಟಿ ಹುಲಿವೇಷ ಕುಣಿತ ವಿಡಿಯೋ ವೈರಲ್

ಬುಧವಾರ, 1 ಸೆಪ್ಟಂಬರ್ 2021 (08:56 IST)
ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ತಮ್ಮ ತವರೂರಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಉಡುಪಿಯ ಬೈಲೂರು ನೀಲಕಂಠ ಮಹಾಬಬ್ಬುಸ್ವಾಮಿ ದೇವಾಲಯದಲ್ಲಿ ರಕ್ಷಿತ್ ಹುಲಿವೇಷ ನೃತ್ಯಕ್ಕೆ ಹೆಜ್ಜೆ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ.

 

ರಕ್ಷಿತ್ ಶೆಟ್ಟಿ ಊರವರ ಜೊತೆ ಸೇರಿಕೊಂಡು ಹುಲಿ ವೇಷಕ್ಕೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ರಕ್ಷಿತ್ ಕುಣಿತ ನೋಡಿ ಅಲ್ಲಿ ನೆರೆದಿದ್ದ ಯುವಕರೂ ಅವರ ಜೊತೆ ಹೆಜ್ಜೆ ಹಾಕಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ತ ಇಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಕ್ಷಿತ್ ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ