ಬಾಲಿವುಡ್ ಮೇಲೆ ಕೆಜಿಎಫ್-2 ದಾಳಿ: ರಾಮ್ ಗೋಪಾಲ್ ವರ್ಮಾ ಟ್ವಿಟ್ ವೈರಲ್!
ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದ ಕೆಜಿಎಫ್-2 ಚಿತ್ರದ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಚಿತ್ರ ಕುರಿತು ಸಾಲು ಸಾಲು ಟ್ವೀಟ್ ಮಾಡಿರುವುದು ಇದೀಗ ವೈರಲ್ ಆಗಿದೆ.
ಸಾಲು ಸಾಲು ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ರಾಮ್ ಗೋಪಾಲ್ ವರ್ಮಾ ಕೆಜಿಎಫ್ -2 ಚಿತ್ರವನ್ನ ಹಾಡಿ ಹೊಗಳಿದ್ದಾರೆ. ಸಿನಿಮಾದ ನಿರ್ದೇಶಕ ಹಾಗೂ ತಂತ್ರಜ್ಞರನ್ನು ಹಾಡಿ ಹೊಗಳಿರುವ ವರ್ಮಾ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾದ ವೇಳೆ ತಮ್ಮ ಹಳೆಯ ಡೇಂಜರಸ್ ಸಿನಿಮಾಕ್ಕೆ ಹೋಲಿಸಿ ಲೇವಡಿ ಮಾಡಿದ್ದರು.
ಅದರೆ, ಕೆಜಿಎಫ್ ಚಿತ್ರದ ಕುರಿತು ಎಲ್ಲಿಲ್ಲದ ಪ್ರೀತಿಯನ್ನು ತೋರಿದ್ದಾರೆ. ಚಿತ್ರ ವಿಶ್ವದಾದ್ಯಂತ ಗೆದಿದ್ದೆ ಗಲ್ಲ ಪೆಟ್ಟಿಗೆ ಕೊಳ್ಳೆ ಹೊಡೆದಿದೆ ಚಿತ್ರ ನೋಡಿದ ಪ್ರತಿಯೊಬ್ಬರು ಸಹ ಚಿತ್ರ ತಂಡದ ಪರಿಶ್ರಮವನ್ನ ಹಾಡಿ ಹೊಗಳುತ್ತಿದ್ದಾರೆ. ಕನ್ನಡಿಗರು ಚಿತ್ರವನ್ನ ತಮ್ಮ ಎದೆಯಲ್ಲಿಟ್ಟುಕೊಂಡು ಆರಾಧಿಸುತ್ತಿದ್ದಾರೆ ನಾನು ಒಬ್ಬ ಸಾಮಾನ್ಯ ವೀಕ್ಷಕನಾಗಿ ಸಿನಿಮಾವನ್ನು ನೋಡಿ ಈ ಟ್ವೀಟ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಸ್ಟಾರ್ ನಟರ ಮೇಲೆ ಕೋಟ್ಯಂತರ ರೂಪಾಯಿ ಹಣವನ್ನು ಸುರಿದು ಸಿನಿಮಾ ಮಾಡುವುದರ ಬದಲು ಸಿನಿಮಾದ ಮೇಲೆ ದುಡ್ಡು ಸುರಿದರೆ ಕೆಜಿಎಫ್-೨ ನಂತರ ಚಿತ್ರಗಳು ತೆರೆಯ ಮೇಲೆ ಬರುತ್ತವೆ ಎಂದು ಸ್ಟಾರ್ ನಟರ ಸಿನಿಮಾಗಳ ಮೇಲೆ ಕೋಟ್ಯಂತರ ರೂಪಾಯಿ ಸುರಿಯುವ ನಿರ್ಮಾಪಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡದ ಬಾವುಟವನ್ನು ಜಗತ್ತಿನ ತುತ್ತತುದಿಯವರೆಗೂ ಹಾರಿಸಿದ್ದಾರೆ. ಸಿನಿಮಾ ರಂಗದ ನಕಾಶೆಯ್ನು ಬದಲಿಸಿದ ನಿರ್ದೇಶಕ ಎಂದು ಪ್ರಶಾಂತ್ ನೀಲ್ರನ್ನು ಹಾಡಿಹೊಗಳಿ ಟ್ವೀಟ್ ಮಾಡಿದ್ದಾರೆ.