ಹುಟ್ಟೂರಿನಲ್ಲೇ ಕೆಜಿಎಫ್ 2 ವೀಕ್ಷಿಸಿದ ಯಶ್ ತಂದೆ-ತಾಯಿ

ಶುಕ್ರವಾರ, 15 ಏಪ್ರಿಲ್ 2022 (09:52 IST)
ಬೆಂಗಳೂರು: ನಿನ್ನೆ ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ 2 ಸಿನಿಮಾವನ್ನು ರಾಕಿಂಗ್ ಸ್ಟಾರ್ ಯಶ್ ತಂದೆ-ತಾಯಿ ಹುಟ್ಟೂರು ಹಾಸನದಲ್ಲಿ ವೀಕ್ಷಿಸಿದ್ದಾರೆ.

ಹಾಸನದಲ್ಲಿ ಯಶ್ ಕುಟುಂಬಕ್ಕೆ ಫಾರ್ಮ್ ಹೌಸ್ ಇದೆ. ಇಲ್ಲಿಯೇ ಇರುವ ಯಶ್ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪಾ ಹಾಸನದಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.

ಈಗಾಗಲೇ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಕೆಜಿಎಫ್ 2 ಸಿನಿಮಾವನ್ನು ಮೊದಲ ದಿನವೇ ವೀಕ್ಷಿಸಿ ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ